ಸಂಗ್ರಹ ಚಿತ್ರ 
ರಾಜ್ಯ

ಚಾಮರಾಜನಗರ ಆಕ್ಸಿಜನ್ ದುರಂತ: ವಿಚಾರಣಾ ಆಯೋಗ ಕಚೇರಿ ಮೈಸೂರಲ್ಲಿ ಸ್ಥಾಪನೆಯಿಂದ ದೂರು ಸಲ್ಲಿಸಲು ಸಮಸ್ಯೆ!

ಆಕ್ಸಿಜನ್ ದುರಂತ ಪ್ರಕಱಣ ಘಟನೆ ನಡೆದಿದ್ದು ಚಾಮರಾಜನಗರದಲ್ಲಿ. ಆದರೆ, ನ್ಯಾಯಾಂಗ ವಿಚಾರಣಾ ಆಯೋಗ ಕಚೇರಿಯನ್ನು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಹೊಸ ಕಟ್ಟದಲ್ಲಿ ಕಚೇರಿ ತೆರೆಯಲಾಗಿದ್ದು, ಇದು ಮೃತರ ಸಂಬಂಧಿಕರು ಹಾಗೂ ನೊಂದವರು ದೂರು ಸಲ್ಲಿಸಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. 

ಚಾಮರಾಜನಗರ: ಆಕ್ಸಿಜನ್ ದುರಂತ ಪ್ರಕಱಣ ಘಟನೆ ನಡೆದಿದ್ದು ಚಾಮರಾಜನಗರದಲ್ಲಿ. ಆದರೆ, ನ್ಯಾಯಾಂಗ ವಿಚಾರಣಾ ಆಯೋಗ ಕಚೇರಿಯನ್ನು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಹೊಸ ಕಟ್ಟದಲ್ಲಿ ಕಚೇರಿ ತೆರೆಯಲಾಗಿದ್ದು, ಇದು ಮೃತರ ಸಂಬಂಧಿಕರು ಹಾಗೂ ನೊಂದವರು ದೂರು ಸಲ್ಲಿಸಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. 

ಮೇ.2 ರಂದು ಸಂಭವಿಸಿದ ಆಕ್ಸಿಜನ್ ದುರಂತ ಘಟನೆಯಲ್ಲಿ 24 ಮಂದಿ ಮೃತಪಟ್ಟಿದ್ದರು. ನ್ಯಾಯಾಂಗ ತನಿಖೆಗ ಆದೇಶಿಸಿ, ನಿವೃತ್ತ ನ್ಯಾ.ಬಿ.ಎ ಪಾಟೀಲರನ್ನು ನೇಮಿಸಿರುವ ಸರ್ಕಾರ, ಇದೀಗ ನ್ಯಾಯಾಂಗ ವಿಚಾರಣಾ ಆಯೋಗದ ಕಚೇರಿಯಲ್ಲಿ ಮೈಸೂರಿನ ಜಲದರ್ಶನಿಯಲ್ಲಿ ತೆರೆದಿದೆ. 

ಮೃತರ ವಾರಸುದಾರರು ಘಟನೆ ಬಗ್ಗೆ ತಿಳಿದಿರುವವರು ದೂರು ಸಲ್ಲಿಸಲು ಆಯೋಗದ ಪ್ರಕಟಣೆ ಹೊರಡಿಸಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತರ್ ಜಿಲ್ಲೆಗೆ ಪ್ರವೇಶ ಇಲ್ಲ, ಬಸ್ ಇಲ್ಲ, ಟ್ರೈನ್ ಇಲ್ಲ, ಮೃತರ ಸಂಬಂಧಿಕರು, ನೊಂದವರು ದೂರು ಸಲ್ಲಿಸಲು ದೂರದ ಮೈಸೂರಿಗೆ ಹೋಗುವುದಾದರೂ ಹೇಗೆ ಎಂಬ ಸಮಸ್ಯೆ ಉದ್ಭವವಾಗಿದೆ. 

ನನ್ನ ಸಹೋದರಿ ಹಾಗೂ ಮಕ್ಕಳನ್ನು ಮೈಸೂರಿನಲ್ಲಿರುವ ಕಚೇರಿಗೆ ಹೇಗೆ ಕರೆದುಕೊಂಡು ಹೋಗಲಿ. ಎರಡು ಹೊತ್ತಿನ ಊಟಕ್ಕೇ ಸಂಕಷ್ಟಪಡುತ್ತಿದ್ದೇವೆಂದು ನಲ್ಲರಾಜ ನಾಯಕ ಎಂಬವವರು ಹೇಳಿದ್ದಾರೆ. 

ದುರಂತದಲ್ಲಿ ಮೃತಪಟ್ಟ ಮತ್ತೊಬ್ಬ ವ್ಯಕ್ತಿಯ ಸಂಬಂಧಿಕ ಮಹೇಶ್ ಎಂಬುವವರು ಮಾತನಾಡಿ, ಇಬ್ಬರು ಸಣ್ಣ ಮಕ್ಕಳು, ವಯಸ್ಸಾದ ಅತ್ತೆ ಮಾವರನ್ನು ಹೇಗೆ ಕರೆದುಕೊಂಡು ಹೋಗಲಿ. ಪರಿಹಾರಕ್ಕಾಗಿ ಜನಪ್ರತಿನಿಧಿಗಳ ಮನೆಮನೆಗೆ ತೆರಳಿ ಮನವಿ ಮಾಡಿಕೊಂಡಿದ್ದೇವೆ. ಸಾವಿನಲ್ಲೂ ತಾರತಮ್ಯವನ್ನೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಈ ನಡುವೆ ಕೆಪಿಸಿಸಿ ಕಾರ್ಯಾಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರು ಮಾತನಾಡಿ, ಸರ್ಕಾರ ಕೂಡಲೇ ಕಚೇರಿಯನ್ನು ಚಾಮರಾಜನಗರಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್