ಡಾ ಕೆ ಸುಧಾಕರ್ 
ರಾಜ್ಯ

ಕೊರೋನಾ ಲಸಿಕೆಯ 2 ಡೋಸ್ ಪಡೆಯುವವರೆಗೂ ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ: ಸಚಿವ ಸುಧಾಕರ್

ಅನ್ ಲಾಕ್ ಆಗುತ್ತಿದೆಯೆಂದರೆ ಕೊರೋನಾ ಸೋಂಕು ಸಂಪೂರ್ಣ ಹೋಗಿದೆ ಎಂದರ್ಥವಲ್ಲ, ಜನರು ಇನ್ನಷ್ಟು ಎಚ್ಚರಿಕೆಯಿಂದಿರಬೇಕು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಅನ್ ಲಾಕ್ ಆಗುತ್ತಿದೆಯೆಂದರೆ ಕೊರೋನಾ ಸೋಂಕು ಸಂಪೂರ್ಣ ಹೋಗಿದೆ ಎಂದರ್ಥವಲ್ಲ, ಜನರು ಇನ್ನಷ್ಟು ಎಚ್ಚರಿಕೆಯಾಗಿರಬೇಕು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರದಿಂದ ಕರ್ನಾಟಕ ಅರ್ಧಪಾಲು ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದರೂ ಜನ ಇಂದಿನಿಂದಲೇ ಓಡಾಡಲು ಆರಂಭಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆಯಾಗಿದೆಯೆಂದರೆ ಜನರು ಬೇಕಾಬಿಟ್ಟಿ ಓಡಾಡಬಹುದು ಎಂದರ್ಥವಲ್ಲ. ಇನ್ನಷ್ಟು ಎಚ್ಚರಿಕೆಯಿಂದಿರಬೇಕು ಎಂದರು.

ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಮೇಲೆ ನಾವು ಸ್ವಲ್ಪ ಮಟ್ಟಿಗೆ ಸುರಕ್ಷಿತ ಎಂದು ಭಾವಿಸಬಹುದು, ಶೇಕಡಾ 70ರಷ್ಟು ಜನಸಂಖ್ಯೆಗೆ ಲಸಿಕೆ ಸಿಗಬೇಕು, ಆಗ ಸೋಂಕು ನಿಯಂತ್ರಣಕ್ಕೆ ಬರಬಹುದು. ಅಲ್ಲಿಯವರೆಗೂ ಪರಿಸ್ಥಿತಿ ಸೂಕ್ಷ್ಮವಾಗಿರುತ್ತದೆ ಎಂದರು.

ಲಾಕ್ ಡೌನ್ ನ್ನು ಸಡಿಲಿಕೆ ಮಾಡುತ್ತಿರುವುದು ಜನರ ಅನುಕೂಲಕ್ಕಾಗಿ, ದೀರ್ಘಕಾಲದವರೆಗೆ ನಿರ್ಬಂಧ ವಿಧಿಸಿದರೆ ಜನಸಾಮಾನ್ಯರ ಬದುಕಿಗೆ ಕಷ್ಟವಾಗುತ್ತದೆ ಜೊತೆಗೆ ಆರ್ಥಿಕವಾಗಿಯೂ ಬಹಳ ನಷ್ಟವಾಗುತ್ತದೆ ಎಂದು, ಅದನ್ನು ಯಾರೂ ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಕೇಳಿಕೊಂಡರು.

ಕೊರೋನಾ ಲಸಿಕೆಯ ಎರಡೂ ಡೋಸ್ ಪಡೆಯುವರೆಗೂ ಜನರು ಎಚ್ಚರಿಕೆಯಿಂದಿರಬೇಕು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಭರವಸೆ ನೀಡಿದರು. 

ಜೂನ್ 14ರಿಂದ ಹಂತ ಹಂತವಾಗಿ ಕ್ರಮೇಣ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, ಸರ್ಕಾರ ನಿನ್ನೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!