ರಾಜ್ಯ

ಕೇದಾರ್ ನಾಥ್ ನಲ್ಲಿ ಮೈಸೂರು ಶಿಲ್ಪಿಯ ಪ್ರತಿಮೆಗೆ ಸ್ಥಾನ!

Nagaraja AB

ಮೈಸೂರು: ಉತ್ತರಾಖಂಡ್ ರಾಜ್ಯದ ಕೇದಾರ್ ನಾಥ್ ನ ಶಂಕರಚಾರ್ಯರ ಸಮಾಧಿ ಬಳಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದ್ದು, ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಮುಡಿಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಅರುಣ್, ಅರಮನೆ ನಗರದ ಐದನೇ ತಲೆಮಾರಿನ ಶಿಲ್ಪಿಯಾಗಿದ್ದು, ಶಿಲ್ಪಕಲಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ನಗರದಲ್ಲಿನ ಜಯಚಾಮರಾಜೇಂದ್ರ ಒಡೆಯರ್, ರಾಮಕೃಷ್ಣ ಪರಮಹಂಸ ಸೇರಿದಂತೆ ಅನೇಕ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.

ಕೇದರ್ ನಾಥ್ ನಲ್ಲಿ ಜೀರ್ಣೋದ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ತೋರಿದ ನಂತರ ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಗೆ ನಿರ್ಧರಿಸಿ, ದೇಶಾದ್ಯಂತ ಅನೇಕ ಶಿಲ್ಪಿಗಳನ್ನು ಆಹ್ವಾನಿಸಲಾಗಿತ್ತು. ಎರಡು ಅಡಿ ಎತ್ತರದ ಕಲ್ಲಿನ ವಿಗ್ರಹವನ್ನು ಮಾದರಿಯನ್ನು ಮಾಡಿದ ಅರುಣ್, ಪ್ರಧಾನಿ ಮೇಲೆ ಪ್ರಭಾವ ಬೀರಿದರು, ಅದರ ನಂತರ ಅವರನ್ನು ಕೆಲಸಕ್ಕೆ ಸೇರಿಸಲಾಯಿತು. 

ಈ ಯೋಜನೆಯು ಕಳೆದ ವರ್ಷ ಪ್ರಾರಂಭವಾಯಿತು ಮತ್ತು ಅರುಣ್ ಅವರ ಒಂಬತ್ತು ಸಹಾಯಕರ ತಂಡದೊಂದಿಗೆ ಅನೇಕ ತಿಂಗಳುಗಳಿಂದ ಪ್ರತಿಮೆಯನ್ನು ಮಾಡುತ್ತಿದೆ. ಅರುಣ್ ಹಾಗೂ ಅವರ ತಂಡ ಇದೀಗ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುವ ಕಾಯದಲ್ಲಿ ನಿರತವಾಗಿದೆ. ಕೆಲವೇ ದಿನಗಳಲ್ಲಿ ಅದನ್ನು ಕೇದರಾನಾಥ್ ಗೆ ಸಾಗಿಸಲಾಗುತ್ತದೆ.

SCROLL FOR NEXT