ರಾಜ್ಯ

ಉಡುಪಿ: 1962, 1971 ಯುದ್ಧಗಳ ಹೀರೋ ನಿವೃತ್ತ ಕರ್ನಲ್ ರಾಮಚಂದ್ರ ರಾವ್ ನಿಧನ

Raghavendra Adiga

ಉಡುಪಿ: ಚೀನಾ, ಪಾಕಿಸ್ತಾನ ಯುದ್ಧಗಳಲ್ಲಿ ಭಾಗವಹಿಸಿದ್ದ ಮೂರು ದಶಕಗಳ ಕಾಲ ಬಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಕರ್ನಲ್ ರಾಮಚಂದ್ರ ರಾವ್ (88) ಉಡುಪಿಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಚೀನಾ ಯುದ್ಧ, ಪಾಕಿಸ್ತಾನ ಯುದ್ಧ ಹಾಗೂ ಬಾಂಗ್ಲಾ ವಿಮೋಚನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ರಾಮಚಂದ್ರ ರಾವ್ ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

1960ರಲ್ಲಿ  ಸೇನೆಗೆ ಸೇರಿದ್ದ ರಾಮಚಂದ್ರ ರಾವ್ 1963ರಲ್ಲಿ ಕ್ಯಾಪ್ಟನ್ ಆಗಿ ನಂತರ ಮೇಜರ್, ಲೆಫ್ಟಿನಿಂಟ್ ಕರ್ನಲ್, ಕರ್ನಲ್ ಹುದ್ದೆಗಳನ್ನು ನಿಭಾಯಿಸಿದ್ದರು.

ರಾಮಚಂದ್ರ ರಾವ್ ನಿವೃತ್ತರಾದ ನಂತರ ಉಡುಪಿಯ ಬಡಾನಿಡಿಯೂರಿನಲ್ಲಿ ನೆಲೆಸಿದ್ದರು. ಮಾಜಿ ಸೈನಿಕರ ವೇದಿಕೆ, ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ, ಶ್ರೀಕೃಷ್ಣ ಬಾಲನಿಕೇತನ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲು ಸೇವೆ ಸಲ್ಲಿಸಿದ್ದ ರಾಮಚಂದ್ರ ರಾವ್ ಅವರಿಗೆ  2017ರಲ್ಲಿ ಯಕ್ಷಗಾನ ಕಲಾರಂಗ ಎಸ್.ಗೋಪಾಲಕೃಷ್ಣರ ಸಂಸ್ಮರಣಾ ‘ಸೇವಾಭೂಷಣ ಪ್ರಶಸ್ತಿ’ ಒಲಿದು ಬಂದಿತ್ತು

SCROLL FOR NEXT