ರಾಜ್ಯ

ನಿಮ್ಹಾನ್ಸ್ ನಿರ್ದೇಶಕಿಯಾಗಿ ಡಾ. ಪ್ರತಿಮಾ ಮೂರ್ತಿ ನೇಮಕ 

Sumana Upadhyaya

ಬೆಂಗಳೂರು: ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕಿಯಾಗಿ ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಡಾ ಪ್ರತಿಮಾ ಮೂರ್ತಿ ನೇಮಕಗೊಂಡಿದ್ದಾರೆ. ಅವರ ಅಧಿಕಾರಾವಧಿ ಮುಂದಿನ 5 ವರ್ಷಗಳ ಕಾಲ ಇರುತ್ತದೆ. 2026ರ ಮಾರ್ಚ್ ನಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ.

ಕೆಲವು ತಾಂತ್ರಿಕ ಕಾರಣಗಳಿಂದ ಏಮ್ಸ್ ನ ನ್ಯೂರೋಲಜಿ ವಿಭಾಗದ ಮುಖ್ಯಸ್ಥೆ ಡಾ ಪದ್ಮ ಶ್ರೀವಾಸ್ತವ್ ಅವರು ನಿಮ್ಹಾನ್ಸ್ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮೋದನೆಯಂತೆ ಡಾ ಪ್ರತಿಮಾ ಮೂರ್ತಿ ಪೂರ್ಣಾವಧಿಯ ನಿರ್ದೇಶಕಿಯಾಗಿ ಈಗ ನೇಮಕಗೊಂಡಿದ್ದಾರೆ.

ಪೂರ್ಣಾವಧಿಯ ನಿರ್ದೇಶಕರ ಅನುಪಸ್ಥಿತಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಮೂವರು ಹಂಗಾಮಿ ನಿರ್ದೇಶಕರನ್ನು ನೇಮಿಸಿತ್ತು.

ಡಾ ಪ್ರತಿಮಾ ಮೂರ್ತಿಯವರಿಗೆ ಕಳೆದ ತಿಂಗಳಷ್ಟೇ ವಿಶ್ವ ಆರೋಗ್ಯ ಸಂಸ್ಥೆಯಿಂದ 'ವಿಶ್ವ ತಂಬಾಕು ರಹಿತ ದಿನ 2021' ಕುರಿತು ಪ್ರಾದೇಶಿಕ ನಿರ್ದೇಶಕರ ವಿಶೇಷ ಗುರುತಿಸುವಿಕೆ ಪ್ರಶಸ್ತಿ ಬಂದಿತ್ತು. 
 

SCROLL FOR NEXT