ಬಾಂಧವ್ಯ ಹಾಗೂ ಆಕೆಯ ತಂದೆ ರಾಜಣ್ಣ 
ರಾಜ್ಯ

ಅಪ್ಪಂದಿರ ದಿನವೇ ಮಂಡ್ಯದಲ್ಲಿ ದುರಂತ: ಮಗಳ ಆತ್ಮಹತ್ಯೆಯಿಂದ ನೊಂದ ತಂದೆಗೆ ಹೃದಯಾಘಾತ

ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಂಡ್ಯ: ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾ,ಮದಲ್ಲಿ ಸಂಭವಿಸಿದ ಘಟನೆಯಲ್ಲಿ ಬಾಂಧವ್ಯ (17) ನೇಣಿಗೆ ಶರಣಾಗಿದ್ದರೆ ಆಕೆಯ ತಂದೆ ರಾಜಣ್ಣ  (65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಾಂಧವ್ಯ ತಾನು ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆ ಜತೆ ಜಗಳವಾಡಿದ್ದಾಳೆ. ಆ ನಂತರ ಭಾನುವಾರ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ದೃಶ್ಯ ನೋಡಿದ ರಾಜಣ್ಣನವರಿಗೆ ಹೃದಯಾಘಾತವಾಗಿದೆ.

ಮಗಳ ಅಂತಿಮ ಸಂಸ್ಕಾರದ ವೇಳೆ ರಾಜಣ್ಣನವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಚಿಕ್ಕ ವಿಷಯಕ್ಕೆ ಒಂದೇ ದಿನ ಎರಡು ಜೀವ ಬಲಿಯಾಗಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT