ಮೃತ ಯುವತಿ ಗಾಯತ್ರಿ ಹಾಗೂ ಆಕೆಯ ತಂದೆ ಆರೋಪಿ ಜಯರಾಮ್ 
ರಾಜ್ಯ

ಮೈಸೂರು: ಅನ್ಯ ಕೋಮಿನ ಯುವಕನ ಪ್ರೀತಿಸಿದ್ದ ಮಗಳನ್ನು ಕೊಂದು ತಂದೆ ಪೋಲೀಸರಿಗೆ ಶರಣು

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದ ಮಗಳನ್ನು ಕೊಂದು ತಂದೆಯೊಬ್ಬ ಪೋಲೀಸರಿಗೆ ಶರಣಾಗಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೈಸೂರು: ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದ ಮಗಳನ್ನು ಕೊಂದು ತಂದೆಯೊಬ್ಬ ಪೋಲೀಸರಿಗೆ ಶರಣಾಗಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬಳಿ ನಡೆದ ಘಟನೆಯಲ್ಲಿ ಗಾಯತ್ರಿ (19) ಹತ್ಯೆಯಾಗಿದ್ದು ಈಕೆಯ ತಂದೆ ಜಯರಾಂ ಕೊಲೆ ಮಾಡಿದ್ದಾನೆ.

ಗಾಯತ್ರಿ ಪಿರಿಯಾಪಟ್ಟಣದ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಉಪ್ಪಾರಗೇರಿ ಬಡಾವಣೆಯ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಮತ್ತು ಆತನನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದಳು. ಕಳೆದ ಒಂದು ತಿಂಗಳಿನಿಂದಲೂ ಈ ವಿಚಾರದಲ್ಲಿ ಪೋಷಕರೊಂದಿಗೆ ಯುವತಿ ವಾಗ್ವಾದ ನಡೆಸಿದ್ದಾಳೆ.

ಇಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟ ನೀಡಲು ಬಂದಿದ್ದಾಗ ಗಾಯತ್ರಿ ಹಾಗೂ ಆಕೆಯ ತಂದೆ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಜಯರಾಮ್ ತನ್ನಲ್ಲಿದ್ದ ಮಚ್ಚಿನಿಂದ  ಮನಬಂದಂತೆ ಕೊಚ್ಚಿ ಮಗಳನ್ನು ಕೊಂದಿದ್ದಾನೆ.

ಘಟನೆ ನಂತರ ಆರೋಪಿ ಪೋಲೀಸರೆದುರು ಶರಣಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು