ರಾಜ್ಯ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದೆ, ಸಿಇಟಿಯಲ್ಲಿ ಇಬ್ಬರಿಗೆ ಒಂದೇ ರ್ಯಾಂಕ್ ಬಂದರೆ ಏನು ಮಾಡುವುದು?: ಗೊಂದಲದಲ್ಲಿ ವಿದ್ಯಾರ್ಥಿಗಳು 

Sumana Upadhyaya

ಬೆಂಗಳೂರು: ಈ ವರ್ಷ ಕೋವಿಡ್ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಂಡಿದೆ. ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ಸಿಇಟಿ ಅಂಕಗಳನ್ನು ನೀಡಲು ರಾಜ್ಯ ಸರ್ಕಾರ ಮಾಡಿರುವ ಮಾನದಂಡಗಳ ಕುರಿತು ವಿದ್ಯಾರ್ಥಿಗಳು ಸಾಕಷ್ಟು ಗೊಂದಲದಲ್ಲಿದ್ದಾರೆ.

ಸಿಇಟಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಒಂದೇ ರ್ಯಾಂಕ್ ಗಳಿಸಿದರೆ ಟೈಬ್ರೇಕರ್ ಗೆ ಯಾವ ರೀತಿ ಮಾನದಂಡವನ್ನು ರೂಪಿಸಲಾಗುತ್ತದೆ ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿರುತ್ತಾರೆ.

ಈ ಬಾರಿ ಸಿಇಟಿ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಒಂದೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು. ಗೋವಿಂದ್ ಎಂಬ ವಿದ್ಯಾರ್ಥಿ, ನಾವು ಸರ್ಕಾರ ಏನಾದರೊಂದು ಪರಿಹಾರ ನೀಡುತ್ತದೆ ಎಂದು ಭಾವಿಸುತ್ತೇವೆ. ಪ್ರಥಮ ಪಿಯುಸಿಯಲ್ಲಿ ನಾವು ಪರೀಕ್ಷೆಗಳಿಗೆ ಅಷ್ಟೊಂದು ಮಹತ್ವ ನೀಡಲಿಲ್ಲ, ಆದರೆ ಈ ಬಾರಿ ಮಾನದಂಡಕ್ಕೆ ಮೊದಲ ವರ್ಷದ ಅಂಕಗಳನ್ನು ಪರಿಗಣಿಸಬೇಕೆಂದು ನಾವು ಕೇಳುತ್ತೇವೆ ಎನ್ನುತ್ತಾರೆ ಅವರು.

ಹೇಮಂತ್ ಎಂಬ ಮತ್ತೊಬ್ಬ ವಿದ್ಯಾರ್ಥಿ, ಎರಡು ಸೆಷನ್ಸ್ ಗಳನ್ನು ನಡೆಸಿರುವುದರಿಂದ ಜೆಇಇ ಅಂಕಗಳನ್ನು ಪರಿಗಣಿಸಬಹುದು. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪಿ ಅವರನ್ನು ಕೇಳಿದಾಗ ಇದಕ್ಕೆ ಈಗಾಗಲೇ ಪರಿಹಾರ ಕಂಡುಕೊಂಡಿದ್ದೇವೆ. ಪ್ರತಿ ವಿಷಯದ ಅಂಕಗಳನ್ನು ತುಲನೆ ಮಾಡಲಾಗುವುದು ಎಂದಿದ್ದಾರೆ.

SCROLL FOR NEXT