ರಾಜ್ಯ

ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ

ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ.

ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಜೀವನದಲ್ಲಿ ಅನೇಕ ಸಮಸ್ಯೆಗಳು ಉಧ್ಭವಿಸಿವೆ ಮತ್ತು ಈ ಮಾರಕ ಸಾಂಕ್ರಾಮಿಕದಿಂದ ಹಲವು ಕುಟುಂಬಗಳು ತಮ್ಮ ಗಳಿಸುವ ಸದಸ್ಯರನ್ನು ಕಳೆದುಕೊಂಡಿವೆ.

ಈ ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ ಎಂದು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ 15.06.2021 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅದಲ್ಲದೆ ಈ ಹಿಂದೆ ಈ ಸೌಲಭ್ಯವನ್ನು ಕೇವಲ ಔದ್ಯೋಗಿಕ ಗಾಯಗಳಾದ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತಿತ್ತು ಇದೀಗ ಈ ಸೌಲಭ್ಯವನ್ನು ಕೋವಿಡ್-19 ನಿಂದಾದ ಮರಣಗಳಿಗೂ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೀಗ ನೋಂದಾಯಿತ  ಮಹಿಳೆಯ ಮರಣವಾದ ಸಂದರ್ಭದಲ್ಲಿ ಅವರ ಪತಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಯೋಜನೆಯು 24.03.2020 ರಿಂದ ಎರಡು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆಯಡಿಯಲ್ಲಿ, ಅವಲಂಬಿತರ ಸೌಲಭ್ಯದಲ್ಲಿ ನೀಡಿದಂತೆಯೇ, ನಗದು ಲಾಭವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಅವಲಂಬಿತರ ಖಾತೆಗಳಲ್ಲಿ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ ಪರಿಹಾರವು ವಿಮಾದಾರರ ವೇತನದ ಶೇ.90% ಅಥವಾ  ರೂ.1800/- ಗಳಾಗಿರುತ್ತದೆ.

ಈ ಪರಿಹಾರವನ್ನು ಪಡೆಯಲು, ಹಕ್ಕುದಾರರು ಕೋವಿಡ್ -19 ಪಾಸಿಟಿವ್ ವರದಿ ಮತ್ತು ಮರಣ ಪ್ರಮಾಣ ಪತ್ರವನ್ನು ಹತ್ತಿರದ ಇ.ಎಸ್.ಐ ಶಾಖಾ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹತ್ತಿರದ ಇ.ಎಸ್.ಐ.ಸಿ ಕಛೇರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ; ಆದರೆ ಡೀಲಿಮಿಟೇಷನ್ ಗೆ ಪ್ರತಿಪಕ್ಷಗಳ ವಿರೋಧ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!

ಪಾಕಿಸ್ತಾನಕ್ಕೆ ಶಾಕ್! ಕೇಂದ್ರದ ಡೀಲಿಮಿಟೇಷನ್ ಮಸೂದೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ; ಕೋರ್ಟ್ ತೀರ್ಪು!

SCROLL FOR NEXT