ರಾಜ್ಯ

ಯಾದಗಿರಿ: ಕೋವಿಡ್ ಲಸಿಕೆ ಭೀತಿಯಿಂದ ಮನೆಗೆ ಬೀಗ ಹಾಕಿ ಕಾಲ್ಕಿತ್ತ ಗ್ರಾಮಸ್ಥರು!

Manjula VN

ಯಾದಗಿರಿ: ಕೋವಿಡ್-19 ಲಸಿಕೆ ಹಾಕುವ ಸಲುವಾಗಿ ಊರಿಗೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಕಂಡ ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಕಾಲ್ಕಿತ್ತಿರುವ ಘಟನೆಯೊಂದು ಯಾದಗಿರಿಯ ಕೆಂಚಗಾರಹಳ್ಳಿಯಲ್ಲಿ ನಡೆದಿದೆ. 

ಲಸಿಕೆ ಪಡೆಯಲು ಹಿಂದೇಟು ಹಾಕಿದ ಕೆಲವು ಗ್ರಾಮಸ್ಥರನ್ನು ಮನವೊಲಿಸಲು ಆರೋಗ್ಯಾಧಿಕಾರಿಗಳು ಪ್ರಯತ್ನಿಸಿದರಾದರೂ, ಅದಕ್ಕೊಪ್ಪದ ಸಾಕಷ್ಟು ಜನರು ಅಧಿಕಾರಿಗಳೊಂದಿಗೇ ವಾಗ್ವಾದಕ್ಕಿಳಿದ ಘಟನೆ ಕೂಡ ನಡೆದಿದೆ. 

ಕೆಂಚಗಾರಹಳ್ಳಿ ಹಾಗೂ ಅಲ್ಲಿಪೂರ ಸೇರಿದಂತೆ ಸುತ್ತಮುತ್ತ ಕೆಲವು ಗ್ರಾಮಗಳಲ್ಲಿ ಲಸಿಕಾಕರಣಕ್ಕೆ ಹಿನ್ನೆಡೆಯುಂಟಾಗಿದೆ. 

ಸಹಾಯಕ ಆಯುಕ್ತ ಸೇರಿದಂತೆ ತಹಸೀಲ್ದಾರರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತೆರಳಿದಾಗ ಅನೇಕರು ಲಸಿಕೆಗೆ ಒಪ್ಪಲಿಲ್ಲ. ವದಂತಿಗಳ ಬಗ್ಗೆ ಸ್ಪಷ್ಟನೆ ನೀಡುವ ಯತ್ನ ನಡೆಸಿದರಾದರೂ ಕೆಲವು ಮನೆಯೊಳಗೆ ಬೀಗ ಹಾಕಿಕೊಂಡು ಕುಳಿತರೆ, ಇನ್ನೂ ಕೆಲವರು ಮನೆಗೆ ಹೊರಗಿನಿಂದ ಬೀಗ ಹಾಕಿ ಹೆದರಿ ಕಾಲ್ಕಿತ್ತರು. 

ಬೆರಳೆಣಿಕೆಯಷ್ಟು ಗ್ರಾಮಸ್ಥರು ಲಸಿಕೆ ಹಾಕಿಸಿಕೊಂಡರಾದರೂ, ಅವರಿಗೆ ಇದಕ್ಕೊಪ್ಪಿಸುವಲ್ಲಿ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. 

ಗ್ರಾಮದಲ್ಲಿ ಒಟ್ಟು 1,350 ಜನಸಂಖ್ಯೆಯಿದ್ದು, 300ಕ್ಕೂ ಹೆಚ್ಚು ಮಂದಿ 45 ವರ್ಷ ಮೇಲ್ಪಟ್ಟವರು ಹಾಗೂ 600 ಮಂದಿ 18 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಇವರಲ್ಲಿ ಕೇವಲ 3-40 ಮಂದಿಯಷ್ಟೇ ಲಸಿಕೆ ಪಡೆದುಕೊಂಡಿದ್ದಾರೆಂದು ಯಾದಗಿರಿ ತಹಶೀಲ್ದಾರ್ ಚೆನ್ನಮಲ್ಲಪ್ಪ ಅವರು ಹೇಳಿದ್ದಾರೆ. 

SCROLL FOR NEXT