ರಾಜ್ಯ

ಬಿಬಿಎಂಪಿ ಐಸಿಯು ಬೆಡ್ ವ್ಯವಸ್ಥೆ: ನೋಡಲ್ ಅಧಿಕಾರಿಯಾಗಿ ಎಸ್.ಹರ್ಷ ನೇಮಕ

Shilpa D

ಬೆಂಗಳೂರು: ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಬಿಬಿಎಂಪಿಯ ಎಲ್ಲ ಎಂಟು ವಲಯಗಳಲ್ಲಿ ತಲಾ 500 ಐಸಿಯು ಹಾಸಿಗೆಗಳ ವಿಶೇಷ ಆಸ್ಪತ್ರೆಗಳನ್ನು ತುರ್ತಾಗಿ ನಿರ್ಮಿಸಲು ನಿರ್ಧರಿಸುವ ರಾಜ್ಯ ಸರ್ಕಾರ, ಈ ಯೋಜನೆ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಯನ್ನಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿರುವ ಐಪಿಎಸ್‌ ಅಧಿಕಾರಿ ಡಾ.ಪಿ.ಎಸ್‌. ಹರ್ಷ ಅವರನ್ನು ನೇಮಿಸಿದೆ.

ತ್ವರಿತವಾಗಿ ಐಸಿಯು ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಹರ್ಷ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್‌ 24ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ, ಬಿಬಿಎಂಪಿ ವತಿಯಿಂದ ಹಾಸಿಗೆ ವ್ಯವಸ್ಥೆಯಾದ ನಂತರ ನಾವು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಅಗತ್ಯವಿಲ್ಲ ಎಂದು ಎಂದು ತಿಳಿಸಿದ್ದಾರೆ.

ಇನ್ನೂ ಪ್ರತಿ ಬಿಬಿಎಂಪಿ ವಲಯಕ್ಕೂ ಶ್ರದ್ಧಾಂಜಲಿ ವಾಹನ ಹಂಚಿಕೆ ಮಾಡಲಾಗುವುದು, ಇವುಗಳ ವ್ಯವಸ್ಥೆಯನ್ನು ಜಂಟಿ ಆಯುಕ್ತರು ನೋಡಿಕೊಳ್ಳಲಿದ್ದಾರೆ. 

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಸಂಕೀರ್ಣಗಳು, ಕಂಪನಿಗಳು, ಎನ್‌ಜಿಒಗಳು ಮತ್ತು ಇತರ ಸ್ಥಳಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು (ಸಿಸಿಸಿ) ರಚಿಸಲು ಸರ್ಕಾರ ಅನುಮತಿ ನೀಡಿದೆ.

SCROLL FOR NEXT