ಬೆಂಗಳೂರು: ಕೋವಿಡ್ 19 ನಿಯಂತ್ರಣ ಸಂಬಂಧ ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದನ್ವಯ "ಎಲ್ಲಾ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಮ್ಲಜನಕ ರೀಫಿಲ್ಲಿಂಗ್ ಏಜೆನ್ಸಿಗಳು ಒಟ್ಟು ಆಮ್ಲಜನಕದ ರಶೀದಿ, ಸರಬರಾಜು ಮತ್ತು ಉಳಿದ ಆಮ್ಲಜನಕದ ವಿವರವನ್ನು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿಗೆ ಪ್ರತಿದಿನ ಒದಗಿಸಬೇಕು."
ರೀಫಿಲ್ಲಿಂಗ್ ಕೇಂದ್ರಗಳ ಉಸ್ತುವಾರಿಗೆ ತಹಶೀಲ್ದಾರ್ ಶ್ರೇಣಿಗಿಂತ ಕೆಳಗಿರುವ ಓರ್ವ ಅಧಿಕಾರಿಯನ್ನು ನೇಮಿಸಲು ಸೂಚಿಸಲಾಗಿದೆ.