ರಾಜ್ಯ

ಕೋವಿಡ್ ಟಾಸ್ಕ್ ಫೋರ್ಸ್ ಪುನಾರಚನೆ: ತಂಡಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವ; ಸುಧಾಕರ್ ಗೆ ಹಿನ್ನಡೆ?

Shilpa D

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ತೆಗೆದುಕೊಳ್ಳುವ ಕ್ರಮಗಳ ಕುರಿತು ಪರಾಮರ್ಶಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಟಾಸ್ಕ್‌ ಫೋರ್ಸ್‌  ಪುನಾರಚನೆ ಮಾಡಲಾಗಿದೆ.

ಟಾಸ್ಕ್ ಫೋರ್ಸ್ ಪುನಾರಚನೆ ಮಾಡಿರುವ ಸಿಎಂ ಯಡಿಯೂರಪ್ಪ ತಂಡದ ಅಧ್ಯಕ್ಷರಾಗಿ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸದಸ್ಯರಾಗಿ ಸಚಿವರುಗಳಾದ ಸುರೇಶ್‌ ಕುಮಾರ್, ಸಿ.ಸಿ ಪಾಟೀಲ್‌ ಹಾಗೂ ಅರೋಗ್ಯ ಸಚಿವ ಡಾ.ಕೆ. ಸುಧಕಾರ್‌ ಅವರನ್ನು ಒಳಗೊಂಡ ಟಾಸ್ಕ್‌ ಫೋರ್ಸ್‌ ಪುನರ್ ರಚನೆ ಮಾಡಲಾಗಿದೆ.

ರಾಜ್ಯದಲ್ಲಿ ದಿನೇ ದಿನೆ ಕೊರೋನಾ ತನ್ನ ಅಟ್ಟಹಾಸವನ್ನ ಮೆರೆಯುತ್ತಿದೆ. ಜನತಾ ಕರ್ಫ್ಯೂ ಜಾರಿ ಮಾಡಿದರೂ ಕೂಡ ಕೋವಿಡ್‌ ಪ್ರಕರಣಗಳು ಮಾತ್ರ ಹತೋಟಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಕೊರೋನಾ ನಿಯಂತ್ರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ತೆಗೆದುಕೊಳ್ಳುವ ಕ್ರಮದ ಬಗ್ಗೆ ಪರಾಮರ್ಶಿಸಲು ರಾಜ್ಯ ಕಾರ್ಯಪಡೆ(ಟಾಸ್ಕ್ ಫೋರ್ಸ್) ಯನ್ನು ಪುನರ್‌ ರಚಿಸಿದೆ. 

ಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಈವರೆಗೂ ಈ ಕಾರ್ಯಪಡೆಯಲ್ಲಿದ್ದರು. ಡಿಸಿಎಂ ಕಾರಜೋಳ ಬದಲಿಗೆ ಮತ್ತೋರ್ವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಚಾಮರಾಜನಗರ ದುರಂತ ನಡೆದ ನಂತರ ಸಿಎಂ ಟಾಸ್ಕ್ ಫೋರ್ಸ್ ಪುನಾರಚಿಸಿದ್ದಾರೆ, ಟಾಸ್ಕ್ ಫೋರ್ಸ್ ರಚನೆಯಾದ ನಂತರ ಅಶ್ವತ್ಥ ನಾರಾಯಣ ಸಭೆ ಕರೆದು ಆಕ್ಸಿಜನ್ ಬಳಕೆ ಹಾಗೂ ಇರುವ ಸೌಲಭ್ಯ ಬಳಸಿಕೊಂಡು ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

SCROLL FOR NEXT