ರಾಜ್ಯ

ಸಾರ್ವಜನಿಕರ ನೆರವಿಗೆ ನಿಂತ ಸೇನೆ: ಏರ್ ಫೋರ್ಸ್ ನಿಲ್ದಾಣದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರ ಆರಂಭ

Srinivasamurthy VN

ಬೆಂಗಳೂರು: ಬೆಂಗಳೂರು ನಗರದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಸಾರ್ವಜನಿಕರ ನೆರವಿಗೆ ಸೇನೆ ಧಾವಿಸಿದ್ದು, 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರವನ್ನು ತೆರೆದಿದೆ.

ಬೆಂಗಳೂರಿನ ಜಾಲಹಳ್ಳಿ ಏರ್ ಫೋರ್ಸ್ ನಿಲ್ದಾಣದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಕೇಂದ್ರವನ್ನು ಭಾರತೀಯ ವಾಯು ಸೇನೆ ತೆರೆದಿದ್ದು, ಈ ಕೋವಿಡ್ ಕೇರ್ ಕೇಂದ್ರ ಮೇ 6ರಿಂದ ಅಂದರೆ ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. ಇಲ್ಲಿ ಏರ್ ಫೋರ್ಸ್ ನ ಕಮಾಂಡೋ ಆಸ್ಪತ್ರೆಯಲ್ಲಿ  ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತೆಯೇ ಇದೇ ಕೋವಿಡ್ ಕೇರ್ ಕೇಂದ್ರ ಅಧಿಕಾರಿಗಳು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು ಕಾರ್ಯ ನಿರ್ವಹಿಸಲಿವೆ. ಬೆಡ್ ಗಳ ಹಂಚಿಕೆ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಿದೆ ಎಂದು ಭಾರತೀಯ ವಾಯುಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT