ರಾಜ್ಯ

ಕೇಂದ್ರಕ್ಕೆ ಹಿನ್ನಡೆ: ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿಹಿಡಿದ 'ಸುಪ್ರೀಂ'!

Raghavendra Adiga

ನವದೆಹಲಿ: ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದೈನಂದಿನ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಹಂಚಿಕೆಯನ್ನು 965 ಮೆ. ಟನ್ ನಿಂದ 1200 ಮೆ. ಟನ್ ಗೆ ಹೆಚ್ಚಿಸುವಂತೆ ಕೇಂದ್ರವನ್ನು ಕೋರಿದ್ದ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರ ನ್ಯಾಯಪೀಠವು ಮೇ 5 ರ ಹೈಕೋರ್ಟ್ ಆದೇಶದ ಬಗ್ಗೆ ತನ್ನ ನಿರ್ಣಯವನ್ನು ನೀಡಿದೆ. ಅಲ್ಲದೆ ಹೈಕೋರ್ಟ್ ಉದ್ದೇಶಪೂರ್ವಕವಾಗಿ ಮತ್ತು ನ್ಯಾಯಯುತವಾಗಿ ಅಧಿಕಾರ ಚಲಾಯಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿನ ಪ್ರತಿ ಹೈಕೋರ್ಟ್ ಸಹ ಆಮ್ಲಜನಕ ಹಂಚಿಕೆಗಾಗಿ ಆದೇಶಗಳನ್ನು ರವಾನಿಸಲು ಪ್ರಾರಂಭಿಸಿದರೆ, ಅದು ದೇಶದ ಆಮ್ಲಜನಕ ಸರಬರಾಜು ಜಾಲವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎನ್ನುವ ಕೇಂದ್ರದ ವಾದವನ್ನು ಒಪ್ಪಿಕೊಳ್ಳಲು ಕೋರ್ಟ್ ನಿರಾಕರಿಸಿದೆ.

SCROLL FOR NEXT