ರಾಜ್ಯ

ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತರದ ಬೆಂಗಳೂರಿನ ಪ್ರಯಾಣಿಕರನ್ನು ವಾಪಸ್ ಕಳಿಸಿದ ರಾಯ್ಪುರ ವಿಮಾನ ನಿಲ್ದಾಣ ಸಿಬ್ಬಂದಿ

Raghavendra Adiga

ಬೆಂಗಳುರು.ರಾಯ್ಪುರ್: ಮೂವರು ಬೆಂಗಳೂರಿನವರೂ ಸೇರಿದಂತೆ 13 ಪ್ರಯಾಣಿಕರ ಗುಂಪನ್ನು ಛತ್ತೀಸ್ ಘರ್ ರಾಯ್ಪುರ್ ವಿಮಾನ ನಿಲ್ದಾಣದಿಂದ ಮತ್ತೆ ಅವರು ರಾಯ್ಪುರಕ್ಕೆ ಆಗಮಿಸಲು ವಿಮಾನವೇರಿದ್ದ ಅದೇ ವಿಮಾನ ನಿಲ್ದಾಣಗಳಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ. ಪ್ರಯಾಣಿಕರು ಬೆಂಗಳೂರು, ಹೈದರಾಬಾದ್ ಮತ್ತು ನವದೆಹಲಿಯಿಂದ ಅವರು ರಾಯ್ಪುರಕ್ಕೆ ಆಗಮಿಸಿದ್ದರು. ಈ ಘಟನೆ ಬುಧವಾರ ಸಂಭವಿಸಿದ್ದು  ಬೆಳಿಗ್ಗೆ 10.25 ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರು ಹತ್ತಿದ್ದರು ಅದರೆ ಕೋವಿಡ್ -19 ಪ್ರಕರಣಗಳ ಇತ್ತೀಚಿನ ಏರಿಕೆಯಿಂದಾಗಿ, ಛತ್ತೀಸ್ ಘರ್ ನ ಎಲ್ಲಾ ವಿಮಾನ ಪ್ರಯಾಣಿಕರಿಗೆ ಮೇ 4 ರಿಂದ ಕೋವಿಡ್ ವರದಿಯನ್ನು ಕಡ್ಡಾಯಗೊಳಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಈ ಮೊದಲು ರಾಯ್ಪುರ್ ವಿಮಾನ ನಿಲ್ದಾಣಯಾಣಿಕರಿಗೆ ಪರೀಕ್ಷೆಗಳನ್ನು ನಡೆಸುವ ಸೌಲಭ್ಯವನ್ನು ಹೊಂದಿತ್ತು, ಆದರೆ ಅದನ್ನು ನಿಲ್ಲಿಸಲಾಗಿದೆ ಎಂದು ಮತ್ತೊಂದು ಮೂಲ ತಿಳಿಸಿದೆ. “ಬೆಂಗಳೂರಿನ ಮೂವರು ಪ್ರಯಾಣಿಕರು ಮತ್ತು ಹೈದರಾಬಾದ್‌ನಲ್ಲಿ ಇಬ್ಬರು ಪ್ರಯಾಣಿಕರು ಪ್ರಮಾಣಪತ್ರವನ್ನು ಹೊಂದಿರಲಿಲ್ಲ. ಉಳಿದವರು ಕೂಡ ಪ್ರಮಾಣಪತ್ರಗಳನ್ನು ಕೊಂಡೊಯ್ಯಲಿಲ್ಲ. ಅವರೆಲ್ಲರನ್ನೂ ವಾಪಸ್ ಕಳುಹಿಸಲಾಯಿತು”. ಈ ವಾರ ಛತ್ತೀಸ್ ಘರ್ ದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ವಿಮಾನ ನಿಲ್ದಾಣದ ಅಧಿಕಾರಿಗಳು ತುಂಬಾ ಕಟ್ಟುನಿಟ್ಟಾಗಿರುತ್ತಾರೆ" ಮೂಲಗಳು ಹೇಳಿವೆ.

ಇಂಡಿಗೊ ಸಂಸ್ಥೆ ತನ್ನ ಪ್ರಯಾಣಿಕರನ್ನು ಒಳಗೊಂಡ ಈ ಘಟನೆಯ ಕುರಿತು ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿತು. "ಪ್ರಯಾಣಿಕರಿಗೆ ಅವರ ಗಮ್ಯಸ್ಥಾನ ವಿಮಾನ ನಿಲ್ದಾಣಗಳಲ್ಲಿನ ಅವಶ್ಯಕತೆಗಳ ಕುರಿತು ನಾವು ಎಸ್.ಎಂ.ಎಸ್. ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತೇವೆ" ಎಂದು ವಕ್ತಾರರು ಹೇಳಿದರು. ಡಿಜಿಸಿಎ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದಂತೆ "ಆರೋಗ್ಯ ಸಚಿವಾಲಯ ನೇಮಕ ಮಾಡಿದ ವಿಮಾನ ನಿಲ್ದಾಣ ಆರೋಗ್ಯ ಅಧಿಕಾರಿ ಪ್ರಯಾಣಿಕರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ."

SCROLL FOR NEXT