ಮೈಸೂರು: ಮೈಸೂರಿನಿಂದ ದಾನಾಪುರಕ್ಕೆ ಸಂಪೂರ್ಣ ಕಾಯ್ದಿರಿಸಿದ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ 11ರಂದು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಲಯ ಕಚೇರಿ ತಿಳಿಸಿದೆ.
ರಾಜ್ಯ ಸರ್ಕಾರ ಕೊರೋನಾ ಲಾಕ್ ಡೌನ್ ನ್ನು ಮೇ 10ರಿಂದ 24ರವರೆಗೆ ಈಗಾಗಲೇ ಘೋಷಿಸಿದ್ದು, ರೈಲು ಮತ್ತು ವಿಮಾನ ಸಂಚಾರ ಇರುತ್ತದೆ. 11ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಜಂಕ್ಷನ್ ನಿಂದ ಹೊರಟು ಮಧ್ಯಾಹ್ನ 13.25ರ ಹೊತ್ತಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಲಿದೆ. ರಾತ್ರಿ 8.45ರ ಹೊತ್ತಿಗೆ ದಾನಾಪುರ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.