ರಾಜ್ಯ

ಬೆಂಗಳೂರಿನಲ್ಲಿ ಲಾಕ್ ಡೌನ್ ಉಲ್ಲಂಘನೆ: ಪೊಲೀಸರಿಂದ 2410 ವಾಹನ ಜಪ್ತಿ

Vishwanath S

ಬೆಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಲಾಕ್ ಡೌನ್ ಜಾರಿಯಾಗಿದ್ದರು ನಿಯಮ ಮೀರಿ ರಸ್ತೆಗಿಳಿದಿದ್ದ 2410 ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ 10 ರಾತ್ರಿ 8 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ 2213 ದ್ವಿಚಕ್ರ, 80 ತ್ರಿಚಕ್ರ  ಹಾಗೂ 117 ನಾಲ್ಕು ಚಕ್ರದ ವಾಹನಗಳು ಸೇರಿ ಒಟ್ಟು 2410 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲ್ಲದೇ, 13 ಎನ್.ಡಿ.ಎಂ.ಎ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

SCROLL FOR NEXT