ಸಾಂದರ್ಭಿಕ ಚಿತ್ರ 
ರಾಜ್ಯ

ಪೊಲೀಸರು ಹೊಡೆಯುವ ಮುಂಬೈ ವಿಡಿಯೋ ರಾಜ್ಯದ್ದು ಎಂದು ಹರಿಬಿಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ

ಮಹಾರಾಷ್ಟ್ರದ ಮುಂಬೈನ ವಿಡಿಯೋವನ್ನು ರಾಜ್ಯದ ಪೊಲೀಸರ ವಿಡಿಯೋ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮಹಿಳೆಯನ್ನು ದಕ್ಷಿಣ ವಿಭಾಗದ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಮಹಾರಾಷ್ಟ್ರದ ಮುಂಬೈನ ವಿಡಿಯೋವನ್ನು ರಾಜ್ಯದ ಪೊಲೀಸರ ವಿಡಿಯೋ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮಹಿಳೆಯನ್ನು ದಕ್ಷಿಣ ವಿಭಾಗದ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್ ಬಂಧಿತ ಮಹಿಳೆಯಾಗಿದ್ದು, ಲಾಕ್​ಡೌನ್​ ಮೊದಲ ದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ವಿಡಿಯೋದಲ್ಲಿ ಪೊಲೀಸರೆಲ್ಲಾ ಸುತ್ತುವರಿದು ವ್ಯಕ್ತಿಯೊಬ್ಬನನ್ನು ಹೊಡೆಯುತ್ತಿದ್ದ ದೃಶ್ಯವಿತ್ತು. ವಿಡಿಯೋ ಕರ್ನಾಟಕದ್ದು ಹಾಗೂ ರಾಜ್ಯ ಪೊಲೀಸರು ದರ್ಪ ತೋರಿದ್ದಾರೆ ಎಂದು ವಿಡಿಯೋವನ್ನು ಪೋಸ್ಟ್​​​ ಮಾಡಿದ್ದರು.

ಈ ಬಗ್ಗೆ ಫ್ಯಾಕ್ಟ್​ ಚೆಕ್​ ಮಾಡಿದಾಗ ಆ ಘಟನೆ ಕಳೆದ‌ ವರ್ಷ ಏಪ್ರಿಲ್​​ 3ರಂದು ಮುಂಬೈನಲ್ಲಿ ನಡೆದಿರುವ ಘಟನೆ ಎಂದು ಕಂಡು ಬಂದಿದೆ.

ಈ ಸುಳ್ಳು ಸುದ್ದಿ ಶೇರ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಟ್ವಿಟರ್ ಮೂಲಕ‌‌ ಸೂಚನೆ ನೀಡಿದ್ದರು.

ಕೂಡಲೇ ವಿಡಿಯೋ ಹರಿಬಿಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್​ ಪೊಲೀಸರು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಪದ್ಮಾ ಹರೀಶ್​ ಗೆ ನೊಟೀಸ್ ನೀಡಿದ್ದರು.

ಪದ್ಮಾ ಅವರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಬಳಿಕ ಮಹಿಳೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಮುಂಬೈನ ಹಳೇ ವಿಡಿಯೋಗೆ ವಾಯ್ಸ್ ಮ್ಯಾಚ್ ಮಾಡಿ ವಿಡಿಯೋ ಹರಿಬಿಡಲಾಗಿತ್ತು. ಸದ್ಯ ಪೊಲೀಸರು ವಿಡಿಯೋ ವೈರಲ್ ಏಕೆ ಮಾಡಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

ಅಂತಿಮ ಹಂತದಲ್ಲಿ 21 ಚಿನ್ನದ ಪದಕಗಳು: 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 85 ಪದಕ!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!