ಲಾಕ್ ಡೌನ್ ನಿಯಮ ಉಲ್ಲಂಘನೆ (ಪಿಟಿಐ ಚಿತ್ರ) 
ರಾಜ್ಯ

ಲಾಕ್ ಡೌನ್ ನಿಯಮ ಉಲ್ಲಂಘನೆ: 448 ವಾಹನ ಜಪ್ತಿ; 3.26 ಕೋಟಿ ರೂ. ದಂಡ ಸಂಗ್ರಹ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಗುರುವಾರ ಜಪ್ತಿ ಮಾಡಿದ್ದು, ಅಂತೆಯೇ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ.

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಗುರುವಾರ ಜಪ್ತಿ ಮಾಡಿದ್ದು, ಅಂತೆಯೇ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ.

ಕಳೆದ 20 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 448 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 429 ದ್ವಿಚಕ್ರ ವಾಹನ, 11 ತ್ರಿಚಕ್ರ ವಾಹನ, 8 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 448 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. 

ಅಲ್ಲದೇ, ಈ ವೇಳೆ ಎನ್‌ಡಿಎಂಎ ಕಾಯ್ದೆಯಡಿ 12 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

3.26 ಕೋಟಿ ರೂ. ದಂಡ ಸಂಗ್ರಹ
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಜಾರಿಯಾಗಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಂದ ನಗರ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಒಟ್ಟು 8 ವಿಭಾಗದಿಂದ 1,34,923 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು ನಿಯಮ  ಉಲ್ಲಂಘಿಸಿದವರಿಗೆ 3.26 ಕೋಟಿ ರೂ. ದಂಡ ವಿಧಿಸಲಾಗಿದೆ.

ಮಾಸ್ಕ್‌ ಧರಿಸದವರಿಂದ 2,88,73,293 ರೂ ಹಾಗೂ ಅಂತರ ಕಾಯ್ದುಕೊಳ್ಳದವರಿಂದ 37,66,783 ಸೇರಿ ಒಟ್ಟು 3,26,400,77 ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಏ.1ರಿಂದ ಮೇ 13 ರವರೆಗೆ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಒಟ್ಟು 3.26  ಕೋಟಿ ದಂಡ ಸಂಗ್ರಹವಾಗಿದೆ. ಇನ್ನು, ನಿಯಮ ಉಲ್ಲಂಘನೆ ಮಾಡಿದ ಹೋಟೆಲ್ 14 , ಅಂಗಡಿಗಳ ಸಂಖ್ಯೆ 18, ಕಾಫಿ ಶಾಪ್​ಗಳ ಸಂಖ್ಯೆ 8, ಒಂದು ಮಾಲ್ ಸೇರಿ ಒಟ್ಟು 41 ಶಾಪ್ ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT