ರಾಜ್ಯ

ಕೋವಿಡ್ ಸಾಂಕ್ರಾಮಿಕಕ್ಕೆ ಕರ್ನಾಟಕ ತತ್ತರ: ಐಐಟಿ ಕಾನ್ಪುರ್ ಮಾದರಿ ಸೂತ್ರ ಪಾಲನೆಗೆ ರಾಷ್ಟ್ರೀಯ ತಜ್ಞರಿಂದ ಸಲಹೆ!

Srinivasamurthy VN

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ 2ನೇ ಅಲೆಯಲ್ಲಿ ಸೋಂಕು ಹೆಚ್ಚಳದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕಕ್ಕೆ ಐಐಟಿ ಕಾನ್ಪುರ್ ಮಾದರಿ ಸೂತ್ರ ಪಾಲನೆಗೆ ರಾಷ್ಟ್ರೀಯ ತಜ್ಞರು ಸಲಹೆ ನೀಡಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಐಐಟಿ ಕಾನ್ಪುರ್ ಸೂತ್ರ ಮಾದರಿಯನ್ನು ವಿವರಿಸಿದರು. 

ವಿವಿಧ ಜಿಲ್ಲೆಗಳಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಪ್ರಕ್ಷೇಪಗಳು ಮತ್ತು ಅಧ್ಯಯನಗಳನ್ನು ಒಳಗೊಂಡಿರುವ ಈ ಮಾದರಿಯು ಕರ್ನಾಟಕಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಸುಬ್ರಮಣಿಯನ್ ಹೇಳಿದರು. 

ಅಂತೆಯೇ ತಾವು ಕರ್ನಾಟಕ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದು, ವಿಶೇಷವಾಗಿ ರಾಜ್ಯದ ಉತ್ತರ ಭಾಗಗಳಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದ್ದಾಗಿ ಹೇಳಿದ್ದಾರೆ. ಅಂತೆಯೇ ಔಷಧದ ಮೇಲೆ ಇತರ ದೇಶಗಳು ಅಳವಡಿಸಿಕೊಂಡಿರುವ ಸಿದ್ಧತೆಗಳು ಮತ್ತು  ಕಾರ್ಯತಂತ್ರಗಳ ಬಗ್ಗೆಯೂ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ಚರ್ಚಿಸಿದ್ದಾರೆ ಎನ್ನಲಾಗಿದೆ.

SCROLL FOR NEXT