ರಾಜ್ಯ

ಕರ್ನಾಟಕದಲ್ಲಿ ಇದುವರೆಗೆ ವೈಟ್ ಫಂಗಸ್ ಪತ್ತೆಯಾಗಿಲ್ಲ: ವೈದ್ಯರು

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರ ಮಧ್ಯೆ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವೈಟ್ ಫಂಗಸ್ (ಬಿಳಿ ಶಿಲೀಂಧ್ರಕ) ಪತ್ತೆಯಾಗಿದೆ. ಕರ್ನಾಟದಲ್ಲಿ ಇದುವರೆಗೆ ಬಿಳಿ ಶಿಲೀಂಧ್ರಕ ವರದಿಯಾಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಕೋವಿಡ್ ಸೋಂಕು ಉಲ್ಭಣವಾಗಿ ಐಸಿಯುನಲ್ಲಿ ದಾಖಲಾಗಿ ಬಿಡುಗಡೆ ಹೊಂದಿ ಬಂದವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಉಂಟಾಗುತ್ತಿದೆ. ಮ್ಯುಕೊರ್ಮಿಕೊಸಿಸ್ ನ್ನು ಬ್ಲ್ಯಾಕ್ ಫಂಗಸ್ ಎಂದು ಕರೆಯಲಾಗುತ್ತಿದ್ದು ಇತರ ಶಿಲೀಂಧ್ರಗಳ ಸೋಂಕುಗಳು, ಉದಾಹರಣೆಗೆ, ಬಾಹ್ಯ ಮತ್ತು ಆಕ್ರಮಣಕಾರಿ ಕ್ಯಾಂಡಿಡಿಯಾಸಿಸ್, ಆಕ್ರಮಣಕಾರಿ ಆಸ್ಪರ್ಜಿಲೊಸಿಸ್, ಇತ್ಯಾದಿಗಳನ್ನು ಈಗ ‘ಬಿಳಿ ಶಿಲೀಂಧ್ರ’ ಎಂದು ಕರೆಯಲಾಗುತ್ತದೆ.

ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಮತ್ತು ಅಂಗಾಂಗ ಕಸಿಗೆ ಒಳಗಾದ ರೋಗಿಗಳಲ್ಲಿ ನಾವು ಅವುಗಳನ್ನು ನೋಡುತ್ತಿದ್ದರೂ, ಸ್ಟೀರಾಯ್ಡ್ ಗಳ ವ್ಯಾಪಕ ಬಳಕೆಯಿಂದಾಗಿ ಕೋವಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಈ ಸೋಂಕುಗಳ ಹಠಾತ್ ಏರಿಕೆ ಕಂಡುಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ನೈರ್ಮಲ್ಯ ಸೇರಿದಂತೆ ಇತರ ಅಂಶಗಳು ಸಹ ಫಂಗಸ್ ಗೆ ಕಾರಣವಾಗಬಹುದು. ಈ ಸೋಂಕುಗಳಿಗೆ ಸಾಮಾನ್ಯವಾಗಿ ಚಿಕಿತ್ಸೆ ನೀಡುವುದು ಕಷ್ಟ. ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ’ ಎಂಬ ಗಾದೆ ಮಾತಿನಂತೆ ಸಾಧ್ಯವಾದಷ್ಟು ಬ್ಲ್ಯಾಕ್ ಫಂಗಸ್ ಬರದಂತೆ ನೋಡಿಕೊಳ್ಳುವುದೇ ಇದಕ್ಕೆ ಪರಿಹಾರವಾಗಿದೆ ಎನ್ನುತ್ತಾರೆ ಮಣಿಪಾಲ ವಿಶ್ವವಿದ್ಯಾಲಯದ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಶಶಿಕಿರಣ ಉಮಾಕಾಂತ್ ತಿಳಿಸಿದ್ದಾರೆ.

SCROLL FOR NEXT