ರಾಜ್ಯ

18-44 ವಯೋಮಾನದವರಿಗೆ ಕೊರೋನಾ ಲಸಿಕೆ ಸಧ್ಯಕ್ಕಿಲ್ಲ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಆದೇಶ

Raghavendra Adiga

ಬೆಂಗಳೂರು: ರಾಜ್ಯ ಸರ್ಕಾರ ತನ್ನ ವ್ಯಾಕ್ಸಿನೇಷನ್ ನೀತಿಯನ್ನು ಮತ್ತೆ ಬದಲಾಯಿಸಿದೆ. 18-44 ವಯೋಮಾನದವರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಅವರು ಶನಿವಾರ ಸ್ಪಷ್ಟೀಕರಣವನ್ನು ನೀಡಿ, ಲಸಿಕೆಗಳು ಪ್ರಸ್ತುತ ಲಭ್ಯವಿಲ್ಲ ಮತ್ತು ಮುಂಚೂಣಿ ಕಾರ್ಯಕರ್ತರು, ದುರ್ಬಲ ವರ್ಗದಂತಹಾ ಆದ್ಯತೆಯವರಿಗೆ ಗುರುತಿಸಲಾಗಿರುವ ಸದಸ್ಯರಿಗೆ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ ಬಗ್ಗೆ ನೋಡಲ್ ಅಧಿಕಾರಿಗೆ ತಿಳಿಸಲಾಗುವುದು ಎಂದಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಹಿಂದೆ ಟ್ವೀಟ್ ಮಾಡಿ “ಮೇ 22 ರಿಂದ 18-44 ವಯೋಮಾನದವರಿಗೆ ಲಸಿಕಾಕರಣ ಪುನಾರಂಭವಾಗಲ್ಲಿದೆ, ರಾಜ್ಯ ಸರ್ಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತೆಯ ವರ್ಗಕ್ಕೆ ಮೊದಲ ಪ್ರಾಧಾನ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ" ಎಂದಿದ್ದರು.

ಕೋವಾಕ್ಸಿನ್‌ನ ಮೊದಲ ಡೋಸ್ ಕೂಡ ಲಭ್ಯವಿಲ್ಲ

ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ "ಸಾರ್ವಜನಿಕರಲ್ಲಿ ಕೆಲವು ಗೊಂದಲಗಳು" ಇರುವುದರಿಂದ ಸ್ಪಷ್ಟೀಕರಣವನ್ನು ನೀಡಲಾಗುತ್ತಿದೆ ಎಂದು ಎನ್ಎಚ್ಎಂ ನಿರ್ದೇಶಕರು ಶನಿವಾರ ಹೇಳಿದ್ದಾರೆ. ಯಾರು ಲಸಿಕೆ ಪಡೆಯುತ್ತಾರೆ ಎಂದು ಸಹ ಪಟ್ಟಿ ಮಾಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ನ ಮೊದಲ ಡೋಸ್ "ನಗರ ಪ್ರದೇಶಗಳಲ್ಲಿ ಆನ್‌ಲೈನ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲೇ ನೊಂದಣಿಯೊಂದಿಗೆ ಲಭ್ಯವಿದೆ, ಆದರೆ ಕೋವಿಶೀಲ್ಡ್ ನ ಎರಡನೇ ಡೋಸ್ ಅಗತ್ಯವಾಗಿರುವವರು ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಬಹುದು. 

ಆದರೆ ಕೊವಾಕ್ಸಿನ್‌ನ ಮೊದಲ ಡೋಸ್ “ಪ್ರಸ್ತುತ ಲಭ್ಯವಿಲ್ಲ” ಮತ್ತು ಅವರ ಎರಡನೇ ಡೋಸ್‌ಗಾಗಿ ಕಾಯುತ್ತಿರುವವರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದರು. ತಯಾರಕರಿಗೆ ನೇರವಾಗಿ ನೀಡಿರುವ ಆರ್ಡರ್ ಮೇಲೆ ಶನಿವಾರ ರಾಜ್ಯಕ್ಕೆ 2,04,050 ಡೋಸ್ ಕೋವಿಶೀಲ್ಡ್  ಆಗಮಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

"ಇಲ್ಲಿಯವರೆಗೆ ರಾಜ್ಯವು ಕ್ರಮವಾಗಿ ಗೋಲ್ ಮತ್ತು ರಾಜ್ಯಸರ್ಕಾರದಿಂದ  1,01,60,060 ಮತ್ತು 13,54,050 ಡೋಸ್ ಕೋವಿಶೀಲ್ಡ್ ಅನ್ನು ಪಡೆದಿದೆ. ಒಟ್ಟಾರೆಯಾಗಿ ನಾವು 1,28,24,560 ಡೋಸ್‌ (13,10,450 ಡೋಸ್ ಕೋವಾಕ್ಸಿನ್ ಸೇರಿ)ಸ್ವೀಕರಿಸಿದ್ದೇವೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT