ಬೆಂಗಳೂರು: ಜಾರ್ಖಂಡ್ ನ ಟಾಟಾ ನಗರದಿಂದ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 9ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಭಾನುವಾರ ನಗರದ ವೈಟ್ ಫೀಲ್ಡ್ ತಲುಪಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್ ನ ತ್ವರಿತ ಸಂಚಾರ ಸುಗಮಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಅನ್ನು ರೈಲ್ವೆ ರೂಪಿಸಿದೆ. ಈ ರೈಲು 120 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು 6 ಕ್ರಯೋಜೆನಿಕ್ ಕಂಟೈನರ್ ಗಳಲ್ಲಿ ಹೊತ್ತು ತಂದಿದೆ. ಪ್ರತಿ ಕ್ರಯೋಜೆನಿಕ್ ಕಂಟೇನರ್ 20 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಹೊಂದಿದೆ.
ಈವರೆಗೆ ಕರ್ನಾಟಕಕ್ಕೆ 1062.14 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಸಾಗಿಸಲಾಗಿದೆ.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ನೆರವಾಗಲು ಭಾರತೀಯ ರೈಲ್ವೆ ಈವರೆಗೆ 224 ರೈಲುಗಳಲ್ಲಿ 884 ಟ್ಯಾಂಕರ್ ಗಳ ಮೂಲಕ ಸುಮಾರು 14,500 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಸಾಗಿಸಿದೆ.