ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಏರಿಕೆ; ಆತಂಕ ಹೆಚ್ಚಳ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ 19 ಕೇಸ್ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ, ಮತ್ತೊಂದೆಡೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ 19 ಕೇಸ್ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ, ಮತ್ತೊಂದೆಡೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ಬೆಳಗಾವಿ, ಚಿತ್ರದುರ್ಗ, ಗದಗ ಮತ್ತು ಕೋಲಾರದಲ್ಲಿ 2 ದಿನಗಳಲ್ಲಿ ಅತಿ ಹೆಚ್ಚು 28 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಎಂಜಿಆರ್ ಎಂಬುದು ಅವಧಿಯ ಆರಂಭದಲ್ಲಿ ಮೌಲ್ಯದ ಶೇಕಡಾವಾರು ಸೂಚಿಸುವುದಾಗಿದೆ. ಸಕ್ರಿಯ ಕೋವಿಡ್ -19 ಪ್ರಕರಣಗಳ ದೈನಂದಿನ ಸರಾಸರಿ ಸಂಖ್ಯೆಯಲ್ಲಿನ ಹೆಚ್ಚಳವನ್ನು ಸೂಚಿಸುತ್ತದೆ, ಇದು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ.

ಜೀವನ್ ರಕ್ಷಾ ನಡೆಸಿದ ವಿಶ್ಲೇಷಣೆಯ ಪ್ರಕಾರ ಏಪ್ರಿಲ್ 21 ರಿಂದ ಮೇ 19 ರವರೆಗೆ  ಅಂದರೆ 28 ದಿನಗಳಲ್ಲಿ, ಬೆಳಗಾವಿಯಲ್ಲಿ  ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ  ಶೇ. 1,096   ರಷ್ಟು ಏರಿಕೆ ಕಂಡಿದೆ, ನಂತರ ಚಿತ್ರದುರ್ಗ 528%  ಗದಗ 749 %  ಮತ್ತು ಕೋಲಾರ್ 788 %. ಆದರೆ, ಮೇ 12 ರಿಂದ ಮೇ 19 ರವರೆಗೆ 7 ದಿನಗಳವರೆಗೆ, ಬೆಳಗಾವಿಯಯಲ್ಲಿ ಸಂಖ್ಯೆ 109%, ಚಿತ್ರದ್ರುರ್ಗ 101%, ಗದಗ ಮತ್ತು ಕೋಲಾರ ತಲಾ 75% ರಷ್ಟಿದೆ,  7 ದಿನಗಳ ಅವಧಿಗೆ  ಸಕ್ರಿಯ ಪ್ರಕರಣಗಳಲ್ಲಿ 2.5% ಮತ್ತು 28 ದಿನಗಳವರೆಗೆ 10% ಆಗಿರಬೇಕು. ಕೆಲವು ಜಿಲ್ಲೆಗಳು ವೈರಸ್ ಹರಡುವುದನ್ನು ತಡೆಯಲು ಸಂಪೂರ್ಣವಾಗಿ ವಿಫಲಗೊಳಿಸಿವೆ.

ಈ ಜಿಲ್ಲೆಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಮತ್ತು ಆಮ್ಲಜನಕದ ಪೂರೈಕೆಯನ್ನು ಪರಿಶೀಲಿಸುವ ತುರ್ತು ಅವಶ್ಯಕತೆಯಿದೆ ಹಾಗೂ ಅದು ಸಮರ್ಪಕವಾಗಿ ಸಜ್ಜುಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಜೀವನ್ ರಕ್ಷಾ ಸಂಚಾಲಕ ಸಂಜೀವ್ ಮೈಸೂರು ಹೇಳಿದ್ದಾರೆ. ಸಕ್ರಿಯ ಕೋವಿಡ್ ಕೇಸ್ ಗಳು ಹೆಚ್ಚಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯು ದೇಶದಲ್ಲಿ ಆರನೇ ಸ್ಥಾನದಲ್ಲಿದೆ.

ಈಗ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ನಾವು ದೊಡ್ಡ ಪ್ರಮಾಣದಲ್ಲಿ ಆರ್ ಎಟಿ ನಡೆಸುತ್ತಿದ್ದೇವೆ. ಸೌಮ್ಯ ಕೋವಿಡ್ ಪ್ರಕರಣಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಮಹಾರಾಷ್ಟ್ರದ ಗಡಿಯಲ್ಲಿ ನಾವು ಅನೇಕ ಪ್ರಕರಣಗಳನ್ನು ನೋಡುತ್ತಿದ್ದೇವೆ. ಹೆಚ್ಚಾಗಿ ಅಥಣಿ, ರಾಯಭಾಗ ಮತ್ತು ನಿಪ್ಪಾಣಿಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿದೆ, ಕೋವಿಡ್ ಪಾಸಿಟಿವ್ ಪತ್ತೆಹಚ್ಚಲು  ಹೆಚ್ಚಿನ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿ ಶಶಿಕಾಂತ್ ಮುನಿಯಲ್ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಪ್ರಕರಣಗಳು ಹೆಚ್ಚುತ್ತಿವೆ. ಆದಾಗ್ಯೂ, ಕಳೆದ ಮೂರು ದಿನಗಳಲ್ಲಿ ಅವು ಕಡಿಮೆಯಾಗುತ್ತಿವೆ. ಮುಂದಿನ ಎರಡು ದಿನಗಳವರೆಗೆ ಸಂಖ್ಯೆಗಳು ಹೇಗೆ ಪ್ರಗತಿ ಹೊಂದುತ್ತವೆ ಎಂಬುದನ್ನು ನಾವು ಇನ್ನೂ ಕಾದು ನೋಡಬೇಕಾಗಿದೆ. ಜನರು ಮುಂದೆ ಬಂದು ಪರೀಕ್ಷೆಗೆ ಒಳಗಾಗುವಂತೆ ನಾವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದು ಗದಗ ಜಿಲ್ಲಾಧಿಕಾರಿ ಡಾ.ಸತೀಶ್ ಬಸರಿಗಿಡಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT