ರಾಜ್ಯ

ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಶೇ.36 ರಷ್ಟು ಮಾತ್ರ ಪರಿಣಮಕಾರಿ: ತಜ್ಞರು

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಕರ್ಫ್ಯೂ ವಿಸ್ತರಣೆ ಮಾಡಿರುವುದು ಶೇ.36 ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

ಮೇ.10-24 ರಂದು ಲಾಕ್ ಡೌನ್ ನಲ್ಲಿ ಶೇ.80 ರಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಮೇ.19 ರಂದು ವಿಸ್ತರಣೆ ಮಾಡಿದ ಬಳಿಕ ಪರಿಣಾಮಕಾರಿತ್ವ ಶೇ.36 ರಷ್ಟು ಮಾತ್ರ ಇದೆ, ಕೋವಿಡ್-19 ತಡೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಐಐಎಸ್ ಸಿಯ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ತಂಡ ಹೇಳಿದೆ.

ಮೂರು ಬೇರೆ ಬೇರೆ ಸನ್ನಿವೇಶಗಳು ನಿರೀಕ್ಷಿಸಲಾಗಿದ್ದ ಪೈಕಿ ಮೇ.25 ವರೆಗಿನ ವಾಸ್ತವದಲ್ಲಿ ದೃಢಪಟ್ಟಿರುವ ಪ್ರಕರಣಗಳು ಏರಿಕೆ ಕಂಡಿವೆ. ಲಾಕ್ ಡೌನ್ ಇಲ್ಲದ  ಅತ್ಯಂತ ಕೆಟ್ಟ ಸಂದರ್ಭದಲ್ಲಿ 24.28 ಲಕ್ಷ ಪ್ರಕರಣಗಳನ್ನು ನಿರೀಕ್ಷಿಸಲಾಗಿತ್ತು, ಶೇ.50 ರಷ್ಟು ಲಾಕ್ ಡೌನ್ ನಲ್ಲಿ 24.21 ಲಕ್ಷ ಇತ್ತು. ಪೂರ್ತಿ ಪರಿಣಾಮಕಾರಿ ಸಂದರ್ಭದಲ್ಲಿ 24.04 ಲಕ್ಷ ಇತ್ತು. 

ಆದರೆ ಒಟ್ಟು ದೃಢಪಟ್ಟ ಪ್ರಕರಣಗಳು 24.72 ಲಕ್ಷ ಪ್ರಕರಣಗಳು ತೀರಾ ಕೆಟ್ಟ ಪರಿಸ್ಥಿತಿಯ ನಿರೀಕ್ಷೆಗಿಂತಲೂ ಹೆಚ್ಚಾಗಿತ್ತು. ಇದು ಸಕ್ರಿಯ ಪ್ರಕರಣಗಳಷ್ಟೇ ಇದೆ ಎಂದು ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ನಿರ್ದೇಶಕ ಪ್ರೊಫೆಸರ್ ಸಶಿಕುಮಾರ್ ಗಣೇಶನ್ ಹೇಳಿದ್ದಾರೆ.
 
ಪ್ರಸ್ತುತ ಇರುವ ವಾಸ್ತವ ಪ್ರಕರಣಗಳ ಆಧಾರದಲ್ಲಿ ರೂಪಿಸಲಾಗಿರುವ ಮಾಡಲ್ ನ ಪ್ರಕಾರ ತೀರಾ ಕೆಟ್ಟ ಪರಿಸ್ಥಿತಿಗಳಲ್ಲಿ ರಾಜ್ಯದಲ್ಲಿ 4,18,275 ಪ್ರಕರಣಗಳು ವರದಿಯಾಗಲಿವೆ ಎಂದು ಊಹಿಸಲಾಗಿತ್ತು. ಆದರೆ ವಾಸ್ತವದಲ್ಲಿ 4.24 ಲಕ್ಷ ಪ್ರಕರಣಗಳಿವೆ. ಲಾಕ್ ಡೌನ್ ವಿಸ್ತರಣೆಯಿಂದ ಕೋವಿಡ್-19 ಪ್ರಕರಣಗಳು ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಮೇ.19-25 ವರೆಗೂ ಪ್ರಕರಣಗಳು ಸಕ್ರಿಯ ಪ್ರಕರಣಗಳು ಏರುಗತಿಯಲ್ಲಿಯೇ ಇವೆ ಇದು ಎಚ್ಚರಿಕೆಯ ಗಂಟೆ ಎಂದು ಪ್ರೊಫೆಸರ್ ಶಶಿಕುಮಾರ್ ಗಣೇಶನ್ ಹೇಳಿದ್ದಾರೆ.

ಆದರೆ ಲಾಕ್ ಡೌನ್ ಪರಿಣಾಮಕಾರಿಯಾಗಿಲ್ಲ ಎಂಬ ಕಾರಣವನ್ನು ನೀಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಶಶಿಕುಮಾರ್ ಗಣೇಶನ್ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT