ಮಡಿಕೇರಿ ಕ್ಯಾಂಟೀನ್ ಹೊರಗಿನ ಜನದಟ್ಟಣೆ 
ರಾಜ್ಯ

ಮಡಿಕೇರಿ: ತಿಂಗಳ ಅವಶ್ಯಕ ವಸ್ತುಗಳಿಗಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತ ಮಾಜಿ ಸೇನಾ ಯೋಧರು!

ತಮ್ಮ ಮಾಸಿಕ ಕೋಟಾದ ಅವಶ್ಯಕ ವಸ್ತುಗಳನ್ನು ಪಡೆಯಲು ಮಡಿಕೇರಿ ಮತ್ತು ವಿರಾಜಪೇಟೆಯ ಸೇನಾ ಕ್ಯಾಂಟೀನ್ ಆವರಣದಲ್ಲಿ ನೂರಾರು ಮಾಜಿ ಸೈನಿಕರು ನೆರೆದಿದ್ದರು.

ಮಡಿಕೇರಿ: ತಮ್ಮ ಮಾಸಿಕ ಕೋಟಾದ ಅವಶ್ಯಕ ವಸ್ತುಗಳನ್ನು ಪಡೆಯಲು ಮಡಿಕೇರಿ ಮತ್ತು ವಿರಾಜಪೇಟೆಯ ಸೇನಾ ಕ್ಯಾಂಟೀನ್ ಆವರಣದಲ್ಲಿ ನೂರಾರು ಮಾಜಿ ಸೈನಿಕರು ನೆರೆದಿದ್ದರು. ಕ್ಯಾಂಟೀನ್ ಆವರಣದಿಂದ ಸುಮಾರು 1 ಕಿ.ಮೀ. ದೂರದವರೆಗೂ ಸಾಲುಗಟ್ಟಿ ನಿಂತಿದ್ದರು. ಜನದಟ್ಟಣೆಯಿಂದಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಡಿಕೇರಿಯ ಸುಮಾರು 300 ನಿವಾಸಿಗಳನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.

ಮಡಿಕೇರಿ ಮತ್ತು ವಿರಾಜಪೇಟೆಯ ಸೇನಾ ಕ್ಯಾಂಟೀನ್ ನಲ್ಲಿ ಸುಮಾರು 4500 ಮಂದಿ ಕಾರ್ಡ್ ಹೊಂದಿರುವವರು ಇದ್ದಾರೆ. ಲಿಕ್ಕರ್ ಸೇರಿದಂತೆ ಪ್ರತಿಯೊಂದು ವಸ್ತುವನ್ನು ತಿಂಗಳ ಕೋಟಾದಲ್ಲಿ ಪಡೆಯಲು ಅವರು ಅರ್ಹರಾಗಿದ್ದಾರೆ. ಆದಾಗ್ಯೂ, ಕನಿಷ್ಟ ಸರಬರಾಜಿನಿಂದಾಗಿ ಪ್ರತಿ ತಿಂಗಳು ಕೋಟಾ ಪಡೆಯಲು ಆಗುತ್ತಿಲ್ಲ. ಅದನ್ನು ಮುಂದಿನ ಸರಬರಾಜಿಗೂ ವರ್ಗಾಯಿಸುವಂತಿಲ್ಲ.

ಏಪ್ರಿಲ್ ನಿಂದ ಮಡಿಕೇರಿ ಮತ್ತು ವಿರಾಜ್ ಪೇಟೆ ಕ್ಯಾಂಟೀನ್ ಮುಚ್ಚಿದ ನಂತರ ಶುಕ್ರವಾರ ಮಾತ್ರ ತೆರೆಯಲಾಗಿತ್ತು. ಲಾಕ್ ಡೌನ್ ವಿನಾಯಿತಿ ಅವಧಿಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ತಮ್ಮ ಅವಶ್ಯಕ ವಸ್ತುಗಳನ್ನು ಪಡೆಯಲು ಕಾರ್ಡ್ ದಾರರು
ಮುಗಿ ಬಿದ್ದರು.

ಬೆಳಗ್ಗೆ 3 ಗಂಟೆಯಿಂದ ಕ್ಯಾಂಟೀನ್ ಹೊರಗಡೆ ಕಾಯುತ್ತಿದ್ದೇನೆ. ಬೆಳಗ್ಗೆ 10 ಗಂಟೆಯವರೆಗೂ ಮಾತ್ರ ಕ್ಯಾಂಟೀನ್ ತೆರೆದಿರುತ್ತದೆ. ಮೇ ತಿಂಗಳ ಕೋಟಾ ಪಡೆಯಲು ಸೋಮವಾರ ಕೊನೆಯ ದಿನ. ಕ್ಯಾಂಟೀನ್ ಕನಿಷ್ಠ ದಿನಗಳ ವರೆಗೂ ಖರೀದಿ ಅವಕಾಶವನ್ನು ವಿಸ್ತರಿಸಬೇಕು ಎಂದು ಕ್ಯೂನಲ್ಲಿ ನಿಂತಿದ್ದ ಗ್ರಾಹಕರೊಬ್ಬರು ಹೇಳಿದರು.

ಈ ಮಧ್ಯೆ ಕ್ಯಾಂಟೀನ್ ಹೊರಗಡೆಯ ದಟ್ಟಣೆಗೆ ಸಂಬಂಧಿಸಿದಂತೆ ಗೋಲ್ಡನ್ ಪಾಮ್ ಕ್ಯಾಂಟೀನ್ ಹಿರಿಯ ಮ್ಯಾನೇಜರ್ ಗೆ ಪತ್ರವೊಂದನ್ನು ಕಳುಹಿಸಲಾಗಿದೆ. ನಿವೃತ್ತ. ಕರ್ನಲ್ ರಾಮನ್, ಮೇ ಸರಬರಾಜುಗಾಗಿ ಕ್ಯಾಂಟೀನ್ ತೆರೆಯುವಲ್ಲಿನ ವಿಳಂಬವನ್ನು ಖಂಡಿಸಿ ಮತ್ತು ಜನದಟ್ಟಣೆಯ ಕಾರಣವನ್ನು ಪ್ರಶ್ನಿಸಿದ್ದಾರೆ.

ನಿವೃತ್ತ ಯೋಧ ರಾಮನ್, ಮೇ ತಿಂಗಳ ವಸ್ತುಗಳಿಗಾಗಿ ಕ್ಯಾಂಟೀನ್ ತೆರೆಯುವಿಕೆಯಲ್ಲಿ ವಿಳಂಬವನ್ನು ಖಂಡಿಸಿದ್ದಾರೆ. ಜನದಟ್ಟಣೆಯನ್ನು ಪ್ರಶ್ನಿಸಿದ್ದಾರೆ. ಈ ಪತ್ರವನ್ನು ಟಿ ಶೆಟ್ಟಿಗೆರಿ ಮಾಜಿ ಸೈನಿಕರ ಅಸೋಸಿಯೇಷನ್ ಕಾನೂನು ಸಲಹೆಗಾರ ಎಂ.ಎನ್. ಸುಬ್ರಮಣಿ ವರ್ಗಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS summit 2026: ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣ ವಿರುದ್ಧ ಪ್ರಧಾನಿ ವಿರುದ್ಧ ಮೋದಿ ಎಚ್ಚರಿಕೆ! Video

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್‌ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!