ರಾಜ್ಯ

ಚಿಕ್ಕಬಾಣಾವಾರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಸ್ಥಳೀಯರ ಒತ್ತಾಯ

Nagaraja AB

ಬೆಂಗಳೂರು: ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ಒಂದು ನಿಮಿಷ ನಿಲುಗಡೆ ಮಾಡಿದರೆ ಸ್ಥಳೀಯ ನಿವಾಸಿಗಳು ಮತ್ತು ಅಕ್ಕಪಕ್ಕದ ಪ್ರದೇಶಗಳಿಂದ ಬರುವವರಿಗೆ ದೊಡ್ಡ ಪರಿಹಾರ ಸಿಗುತ್ತದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಇದು ಯಶವಂತಪುರ ರೈಲು ನಿಲ್ದಾಣದ ದಟ್ಟಣೆಯನ್ನು ಸಹ  ಕಡಿಮೆ ಮಾಡುತ್ತದೆ. ಇಲ್ಲಿಂದ ಅಲ್ಲಿಗೆ ಹೋಗಲು ಒಂದು ಗಂಟೆ ಬೇಕಾಗುತ್ತದೆ. 
 
ಹುಬ್ಬಳ್ಳಿ ಮತ್ತು ಮಂಗಳೂರು ಕಡೆಗೆ ತೆರಳುವ ಎಕ್ಸ್ ಪ್ರೆಸ್ ರೈಲುಗಳು ಸ್ವಲ್ಪ ಹೊತ್ತು ನಿಲುಗಡೆ ಮಾಡಬೇಕಾದ ಅಗತ್ಯವಿದೆ ಎಂದು ನಿವಾಸಿ ಆರ್. ಮುಕುಂದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.  ತುಮಕೂರು, ಅರಸಿಕೆರೆ, ತಿಪಟೂರು, ದಾವಣಗೆರೆ, ಶಿವಮೊಗ್ಗದ ಕಡೆಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶಿವಮೊಗ್ಗ ಟೌನ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ಗೆ ಹೋಗಬೇಕಾದರೆ ಯಶವಂತಪುರಕ್ಕೆ ತೆರಳಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ದಾದಾದರ್ ನಿಂದ ಆಗಮಿಸುವ ಚಾಲುಕ್ಯ ಎಕ್ಸ್ ಪ್ರೆಸ್ ಅನಧಿಕೃತವಾಗಿ ಕೆಲವೊಮ್ಮೆ 20 ನಿಮಿಷಗಳವರೆಗೂ ನಿಲುಗಡೆ ಮಾಡುತ್ತದೆ. ಇದನ್ನು ಅಧಿಕೃತಗೊಳಿಸದರೆ ಎಷ್ಟೋ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಇದರಿಂದ ಚಿಕ್ಕಬಣಾವಾರದ ನಿವಾಸಿಗಳಿಗೆ ಮಾತ್ರವಲ್ಲದೇ, ಪಿಣ್ಯ, ಜಾಲಹಳ್ಳಿ, ಅಬ್ಬಿಗೆರೆ,. ಹೆಸರಘಟ್ಟ ಮತ್ತು ಯಲಹಂಕದ ನಿವಾಸಿಗಳಿಗೂ ಅನುಕೂಲವಾಗಲಿಗದೆ. ನಮಗೆ ಹೋಲಿಸಿದರೆ ಯಲಹಂಕದ ನಿವಾಸಿಗಳು 30 ರಿಂದ 35 ನಿಮಿಷಗಳಲ್ಲಿ ರೈಲು ನಿಲ್ದಾಣ ತಲುಪಬಹುದು, ಚಿಕ್ಕಬಣಾವಾರದಲ್ಲಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿದ್ದು, ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. 

ಪೀಕ್ ಅವರ್ ನಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಚಿಕ್ಕಬಣಾವಾರದಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಅಗತ್ಯವಿದೆ. ಇದರಿಂದ ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ದಿನನಿತ್ಯ ಸಂಚರಿಸುವವರಿಗೆ ಅನುಕೂಲವಾಗಲಿದೆ ಎಂದು ಮತ್ತೋರ್ವ ನಿವಾಸಿ ಸಂಜೀವ್( ಹೆಸರು ಬದಲಿಸಲಾಗಿದೆ)  ಮನವಿ ಮಾಡಿದರು. 

ನಾವು ಇಲ್ಲಿ ನಿಲುಗಡೆ ಸಾಧ್ಯತೆಯನ್ನು ಪರಿಶೀಲಿಸುತ್ತೇವೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ತಿಳಿಸಿದ್ದಾರೆ. 

SCROLL FOR NEXT