ರಾಜ್ಯ

ರಾಜ್ಯಾದ್ಯಂತ ನ.11ಕ್ಕೆ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ

Vishwanath S

ಬೆಂಗಳೂರು: ನವೆಂಬರ್ 11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿಯನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ನವೆಂಬರ್ 11ರಂದು ಒನಕೆ ಓಬವ್ವ ಅವರ ಜನ್ಮ ದಿನವಾಗಿದ್ದು ಈ ದಿನವನ್ನೇ ಓಬವ್ವ ಜಯಂತಿಯನ್ನಾಗಿ ಘೋಷಿಸಲಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ನಡೆಯಲಿದೆ. 

ಕರ್ನಾಟಕದ ರಾಣಿಯರಾದ ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕ ಸಾಲಿನಲ್ಲಿ ಒಬ್ಬರೆಂದು ಒನಕೆ ಓಬವ್ವರನ್ನು ಪರಿಗಣಿಸಲಾಗಿದೆ.

SCROLL FOR NEXT