ಸಿಎಂ ಬಸವರಾಜ ಬೊಮ್ಮಾಯಿ 
ರಾಜ್ಯ

ಪ್ರಧಾನಿ ಭೇಟಿಗೆ ನಾಳೆ ಸಮಯ ಸಿಗುವ ನಿರೀಕ್ಷೆಯಿದೆ; ಅಂತಾರಾಜ್ಯ ಜಲವಿವಾದ ಬಗ್ಗೆ ಚರ್ಚೆ: ದೆಹಲಿ ಪ್ರವಾಸ ವಿವರ ನೀಡಿದ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ತಮ್ಮ ಪ್ರವಾಸದ ಬಗ್ಗೆ ಇಂದು ಬೆಳಗ್ಗೆ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಪ್ರಧಾನ ಮಂತ್ರಿಗಳ ಭೇಟಿಗೆ ಸಮಯ ಕೇಳಿದ್ದು, ನಾಳೆ ಸಿಗುವ ನಿರೀಕ್ಷೆಯಿದೆ. ಇತರ ಕೇಂದ್ರ ಸಚಿವರುಗಳಿಗೆ ರಾಜ್ಯದ ಯೋಜನೆಗಳು ಮತ್ತು ವಿಶೇಷವಾಗಿ ಅಂತರ್ ರಾಜ್ಯ ಜಲ ವಿವಾದದ ಬಗ್ಗೆ ವಕೀಲರ ಜೊತೆಗೆ ಕೂಡ ಚರ್ಚೆ ಮಾಡುತ್ತೇನೆ ಎಂದರು.

ಕೃಷ್ಣ-ಕಾವೇರಿ ಜಲ ವಿವಾದದ ಕೇಸುಗಳ ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಿ ಚರ್ಚೆ ಮಾಡುವ ಕಾರ್ಯಕ್ರಮ ನನ್ನ ಭೇಟಿಯಲ್ಲಿ ನಿಗದಿಯಾಗಿದೆ. ನಂತರ ಸಾಯಂಕಾಲ ಖಾಸಗಿ ಚಾನೆಲ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗಿಯಾಗಲಿದ್ದೇನೆ ಎಂದರು.

ನಾಳೆ ಪ್ರಧಾನಿಯವರನ್ನು ಭೇಟಿಯಾದರೆ ಅವರ ಜೊತೆ ಚರ್ಚೆ ನಡೆಸಿ ಸಾಯಂಕಾಲ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ನನ್ನ ಇಂದಿನ ಭೇಟಿಯಲ್ಲಿ ನಾನು ವಿಚಾರವಿಟ್ಟುಕೊಂಡಿಲ್ಲ, ದೆಹಲಿ ಭೇಟಿಯಲ್ಲಿ ವರಿಷ್ಠರ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆಯಾಗುತ್ತದೆಯೋ ಗೊತ್ತಿಲ್ಲ ಎಂದಷ್ಟೇ ಸಿಎಂ ಬೊಮ್ಮಾಯಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

Delhi Liquor Scam: ನ್ಯಾ.ಸ್ವರ್ಣ ಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಕೋರ್ಟ್ ಬಹಿಷ್ಕರಿಸಿದ ಸಿಸೋಡಿಯಾ..!

2013-18 ರಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ- ಅವರೀಗ ಅಧಿಕಾರ ಬಿಟ್ಟು ಕೊಡೋಕೆ 'ಸಿದ್ಧ'ರಾಮಯ್ಯ: ಕೆ.ಎನ್ ರಾಜಣ್ಣ

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

SCROLL FOR NEXT