ಸಾಂದರ್ಭಿಕ ಚಿತ್ರ 
ರಾಜ್ಯ

ವಿವಾಹಕ್ಕೂ ಮುನ್ನ ಅತ್ಯಾಚಾರ: ಪತಿ ವಿರುದ್ಧ ಬಿಗ್ ಬಾಸ್ ಮಾಜಿ ಸ್ಪರ್ಧಿ, ಖ್ಯಾತ ನಟಿ ದೂರು

ವಿವಾಹಕ್ಕೂ ಮುನ್ನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟಿಯೊಬ್ಬರು ತಮ್ಮ ಪತಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ವಿವಾಹಕ್ಕೂ ಮುನ್ನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟಿಯೊಬ್ಬರು ತಮ್ಮ ಪತಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಪತ್ರಿಕೆಯೊಂದು ಈ ಕುರಿತು ವರದಿ ಮಾಡಿದ್ದು, ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿಯೊಬ್ಬರು ತಮ್ಮ ಮೇಲೆ ಪತಿ ವಿವಾಹಪೂರ್ವ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ವಿವಾಹದ ಮೊದಲೇ ನನ್ನ ಮೇಲೆ ಅತ್ಯಾಚಾರ ನಡೆಸಿ ಬಳಿಕ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಿ ಪತಿ ಹಾಗೂ ಅವರ ಪೋಷಕರ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕಿರುತೆರೆ ನಟಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.  ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ನಾವಿಬ್ಬರೂ ಪರಿಚಯವಾಗಿದ್ದು ಗ್ರಾಮೀಣ ಪ್ರತಿಭೆ ಬೆಳೆಯಬೇಕೆಂದು ಪುಸಲಾಯಿಸಿ ಆತ ಹತ್ತಿರವಾಗಿದ್ದ. ಒಂದು ದಿನ ಭೇಟಿ ಮಾಡಲು ಕೊರೊನಾ ಇರುವುದರಿಂದ ಹೊರಗೆ ಬೇಡ ಮನೆಗೆ ಬಾ ಎಂದು ಕರೆದಿದ್ದ. ಮನೆಗೆ ಹೋದಾಗ ನನ್ನ ಮೇಲೆ ಅತ್ಯಾಚಾರವೆಸಗಲಾಗಿದೆ. ಮನೆಯಲ್ಲಿ ಅಳುತ್ತಿದ್ದಾಗ ಮದುವೆ ಮಾಡಿಕೊಳ್ಳುವ ಭರವಸೆ ನೀಡಿ, ಮದುವೆಯಾದರೆ ಸರಿಯಾಗಲಿದೆ ಎಂದು ಆರೋಪಿ ಪತಿ ಹೇಳಿದ್ದ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಇದಾದ ಬಳಿಕ ಹಲವು ಬಾರಿ ಇದೇ ರೀತಿ ಬೇಡವೆಂದು ಹೇಳಿದರೂ ಕೇಳದೆ ಅತ್ಯಾಚಾರ ಮಾಡಲಾಗಿದೆ. ಕೆಲ ತಿಂಗಳ ಬಳಿಕ ಮದುವೆಯಾಗುವಂತೆ ಕೇಳಿದ್ದೆ, ಈ ವೇಳೆ ನಿಧಾನವಾಗಿ ದೂರವಾಗಲು ಆತ ಯತ್ನಿಸಿದ್ದಾನೆ. ಗಲಾಟೆ ಮಾಡಿದಾಗ ಮದುವೆಗೆ ನಿರಾಕರಣೆ ಮಾಡಿದ್ದ. ಗೆಳೆಯನ ಜೊತೆ ದೇಗುಲದಲ್ಲಿ ಮಾತುಕತೆ ನಡೆಸಿ ತಾಳಿ ಕಟ್ಟಿದ್ದ. ಬಳಿಕ ಅವರ ಮನೆಗೆ ಹೋದಾಗ ಮದುವೆ ಆಗಿಲ್ಲ, ಬಲವಂತವಾಗಿ ತಾಳಿ ಕಟ್ಟಿಸಿದ್ದರೆಂದು ಆರೋಪಿ ಪತಿ ಹೇಳಿದ್ದ. ಇದೇ ವಿಚಾರವಾಗಿ ಗಲಾಟೆ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದೆ. ಅವರ ಮನೆಯಲ್ಲಿ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು. ನನ್ನ ಜಾತಿಯನ್ನು ನಿಂದಿಸಿದ್ದರು. ತನ್ನ ಗೌರವಕ್ಕೆ ಧಕ್ಕೆ ಆಗುವಂತೆ ಮಾತಾಡಿದ್ದರು. ಆರೋಪಿ ಪತಿ ತಂದೆ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಹಾಕುವುದಾಗಿ ಬೆದರಿಸಿದ್ದ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳನ್ನು ಉಲ್ಲೇಖಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಂತ್ರಸ್ತೆಯ ಇಬ್ಬರು ಗೆಳೆಯರ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಸಂತ್ರಸ್ತೆ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾಗಿ ಮಾಹಿತಿ ನೀಡಿದ್ದರು. ಹೀಗಾಗಿ ಸಂತ್ರಸ್ತೆಗೆ ನೀಡಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಕೋರಿ ವೈದ್ಯರಿಗೆ ನೋಟಿಸ್ ಜಾರಿ ಮಾಡಿ ಘಟನೆಯ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT