ರಾಜ್ಯ

ವರ್ಷಾಂತ್ಯಕ್ಕೆ ಏರೋಸ್ಪೇಸ್, ರಕ್ಷಣಾ ನೀತಿಯಲ್ಲಿ ಅಗತ್ಯ ಬದಲಾವಣೆ: ಸಚಿವ ಮುರುಗೇಶ್ ನಿರಾಣಿ

Manjula VN

ಬೆಂಗಳೂರು: ರಾಜ್ಯ ಸರ್ಕಾರವು ಈ ವರ್ಷಾಂತ್ಯದೊಳಗೆ ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ಗುರುವಾರ ಹೇಳಿದ್ದಾರೆ.

ಲೀಲಾ ಪ್ಯಾಲೇಸ್‌ನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ , ಭಾರತೀಯ ರಕ್ಷಣಾ ಉತ್ಪಾದಕರ ಸಂಘದ ಸಹಯೋಗದೊಂದಿಗೆ ಅಮೆರಿಕ ಮುಂಚೂಣಿ ರಕ್ಷಣಾ ಉತ್ಪಾದನಾ ಸಂಸ್ಥೆ ಲಾಕ್‌ಹೀಡ್‌ ಮಾರ್ಟಿನ್‌ ಆಯೋಜಿಸಿದ್ದ 8ನೇ ವಾರ್ಷಿಕ ಪೂರೈಕೆದಾರರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದ ಅವರು,  ರಕ್ಷಣಾ ಸಂಬಂಧಿ ಉದ್ದಿಮೆಗಳನ್ನು ಆಕರ್ಷಿಸಲು ಪ್ರಸ್ತುತ ಜಾರಿಯಲ್ಲಿರುವ ಏರೋಸ್ಪೇಸ್‌ ಮತ್ತು ರಕ್ಷಣಾ ನೀತಿಯಲ್ಲಿ ಅಗತ್ಯ ಬದಲಾವಣೆ ತರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ಹೊಸ ನೀತಿಯು ಮೂಲ ಉಪಕರಣ ತಯಾರಕರನ್ನು (ಒಇಎಂ) ರಾಜ್ಯಕ್ಕೆ ಸೆಳೆಯುವುದರ ಮೇಲೆ ಕೇಂದ್ರೀಕರಿಸುತ್ತದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ತುಮಕೂರು, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿಯೂ ಕ್ಲಸ್ಟರ್‌ಗಳ ಸ್ಥಾಪನೆಗೆ ಚಿಂತನೆಗಳು ನಡೆಯುತ್ತಿವೆ.

ಕರ್ನಾಟಕವು ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಹೊಂದಿದೆ. ಉದ್ದಿಮೆಗೆ ಸಂಬಂಧಿಸಿದ ವಿಷಯದಲ್ಲಿ ದೇಶದಲ್ಲೇ ಅಗ್ರಪಂಕ್ತಿಯ ರಾಜ್ಯವಾಗಿ ಹೊಮ್ಮಿದೆ. ದೇಶದ ಶೇ. 25 ವಿಮಾನ ಮತ್ತು ಬಾಹ್ಯಾಕಾಶ ಸಂಬಂಧಿ ಉದ್ದಿಮೆಗಳು ರಾಜ್ಯದಲ್ಲಿದೆ. ವಿಮಾನ ಮತ್ತು ಬಾಹ್ಯಾಕಾಶ ಸಂಬಂಧಿ ಉತ್ಪಾದನೆಯ ಶೇ.67 ರಾಜ್ಯದಲ್ಲಿ ನಡೆಯುತ್ತಿದೆ. ರಕ್ಷಣಾ ಸಂಬಂಧಿ ಉದ್ದಿಮೆಗಳನ್ನು ಆಕರ್ಷಿಸಲು ಪ್ರಸ್ತುತ ಜಾರಿಯಲ್ಲಿರುವ ಏರೋಸ್ಪೇಸ್‌ ಮತ್ತು ರಕ್ಷಣಾ ನೀತಿಯಲ್ಲಿ ಅಗತ್ಯ ಬದಲಾವಣೆ ತರಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಮೇಕ್‌ ಇನ್‌ ಇಂಡಿಯಾದಾಗ ಜಾರಿಯಾದಾಗ ಶೇ.30 ಉತ್ಪಾದನೆ ದೇಶದಲ್ಲಿ ನಡೆಯಬೇಕು ಉಳಿದ ಶೇ.70ರಷ್ಟು ಆಮದು ಮಾಡಿಕೊಳ್ಳಬಹುದು ಎಂಬ ಭಾವನೆಯಿತ್ತು. ಆದರೆ ಈಗ ಶೇ.60ರಿಂದ ಶೇ.70ರಷ್ಟು ಭಾರತದಲ್ಲೇ ಉತ್ಪಾದನೆ ಆಗುತ್ತಿದೆ. ಭಾರತದಲ್ಲಿ ಜ್ಞಾನ, ಉತ್ಪಾದನೆ ಮತ್ತು ತಂತ್ರಜ್ಞಾನದ ದೊಡ್ಡ ಹೂಡಿಕೆ ನಡೆಯುತ್ತಿದೆ ಎಂದಿದ್ದಾರೆ.

SCROLL FOR NEXT