ರಾಜ್ಯ

88 ದಿನ ಕಳೆದರೂ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತಿದೆ: ಪರಿಸರ ಕಾರ್ಯಕರ್ತೆ ದಿಶಾ ರವಿ

Manjula VN

ಬೆಂಗಳೂರು: ಪ್ರಕ್ರಿಯೆಗಳ ಪಾಲನೆ ಮಾಡಿದ್ದರೂ ಕೂಡ ಪಾಸ್'ಪೋರ್ಟ್ ನಿರಾಕರಿಸಲಾಗುತ್ತಿದೆ ಎಂದು ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಶನಿವಾರ ಆರೋಪಿಸಿದ್ದಾರೆ.

ಸ್ವೀಡಿಷ್ ಹವಾಮಾನ ಬದಲಾವಣೆ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರ ಸಂಸ್ಥೆ 'ಫ್ರೈಡೇಸ್ ಫಾರ್ ಫ್ಯೂಚರ್' ಗಾಗಿ ಕೆಲಸ ಮಾಡುತ್ತಿದ್ದು, ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಲು ಇತರೆ ಮೂರು ಸದಸ್ಯರೊಂದಿಗೆ ಗ್ಲಾಸ್ಗೋದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ, ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅನಗತ್ಯವಾಗಿ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದೇನೆ. ನನ್ನ ಪಾಸ್‌ಪೋರ್ಟ್ ಅನ್ನು ತಡೆಹಿಡಿಯಲಾಗಿದೆ. ಇದು ನನ್ನ ನಾಗರಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಸ್‌ಪೋರ್ಟ್ ಪಡೆಯಲು ಕ್ರಿಮಿನಲ್ ಮೊಕದ್ದಮೆಗಳು ಅಡ್ಡಿಯಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಿದೆ.

ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದೇನೆ. ಇದೂವರೆಗೆ ಎರಡು ಬಾರಿ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿದ್ದರು, ಆದರೆ 88 ದಿನಗಳ ನಂತರವೂ ಪಾಸ್‌ಪೋರ್ಟ್ ಸಿಕ್ಕಿಲ್ಲ ಎಂದು ದಿಶಾ ರವಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಹಿನ್ನೆಲೆಯಲ್ಲಿ ದಿಶಾ ರವಿಯವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನ ನಡೆಸಲಾಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ದಿಶಾ ರವಿಯವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ವಕೀಲ ಎಸ್.ಬಾಲನ್ ಅವರು ಪ್ರತಿಕ್ರಿಯೆ ನೀಡಿ, ದಿಶಾಗೆ ಪಾಸ್‌ಪೋರ್ಟ್ ನಿರಾಕರಿಸುವುದು  ಅಧಿಕಾರದ ದುರುಪಯೋಗವಾಗಿದೆ. ದೆಹಲಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದರು. ಪೊಲೀಸರು ಯಾವುದೇ ಆರೋಪಪಟ್ಟಿ ಸಲ್ಲಿಸದ ಕಾರಣ ಆಕೆ ವಿಚಾರಣಾಧೀನ ಕೈದಿಯೂ ಅಲ್ಲ ಎಂದು ಹೇಳಿದ್ದಾರೆ.

SCROLL FOR NEXT