ರಾಜ್ಯ

ಐಐಎಂ-ಬೆಂಗಳೂರಿನಲ್ಲಿ ದಾಖಲೆಯ ಪ್ಲೇಸ್ ಮೆಂಟ್, ಆರ್ಥಿಕತೆ ಪುನಶ್ಚೇತನದ ಸೂಚನೆ

Lingaraj Badiger

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರಿನಲ್ಲಿ(ಐಐಎಂ-ಬಿ) ನೇಮಕಾತಿಗಾಗಿ ಹಾಜರಾಗಿದ್ದ ಎಲ್ಲಾ 513 ವಿದ್ಯಾರ್ಥಿಗಳನ್ನು ಎರಡು ಸಂದರ್ಶನಗಳ ಮೂಲಕ ಆಯ್ಕೆಯಾಗಿದ್ದು, ಇದು ಒಂದೂವರೆ ವರ್ಷಗಳ ಕೋವಿಡ್ ಸಂಕಷ್ಟದ ನಂತರ ದೇಶದ ಆರ್ಥಿಕತೆಯ ಚೇತರಿಕೆಯ ಸಂಕೇತವಾಗಿದೆ ಮತ್ತು ಇದನ್ನು "ರೆಕಾರ್ಡ್ ಸಮ್ಮರ್ ಪ್ಲೇಸ್‌ಮೆಂಟ್ ಸೆಷನ್" ಎಂದು ಕರೆಯಲಾಗಿದೆ.

ಸ್ನಾತಕೋತ್ತರ ಕಾರ್ಯಕ್ರಮ(ಪಿಜಿಪಿ) ಮತ್ತು ಸ್ನಾತಕೋತ್ತರ ಕಾರ್ಯಕ್ರಮ-ಬಿಸಿನೆಸ್ ಅನಾಲಿಟಿಕ್ಸ್(ಪಿಜಿಪಿ-ಬಿಎ) ವಿದ್ಯಾರ್ಥಿಗಳ ನೇಮಕಾತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ಲೇಸ್ ಮೆಂಟ್ ಸುಮಾರು ಶೇ. 30 ರಷ್ಟು ಹೆಚ್ಚಳವಾಗಿದೆ ಎಂದು ವೃತ್ತಿ ಅಭಿವೃದ್ಧಿ ಸೇವೆಗಳ ಅಧ್ಯಕ್ಷ ಪ್ರೊ.ಯು.ದಿನೇಶ್ ಕುಮಾರ್ ಹೇಳಿದ್ದಾರೆ.

"ಕಳೆದ ವರ್ಷಕ್ಕೆ ಹೋಲಿಸಿದರೆ ನಾವು ಪ್ರಮುಖ ನೇಮಕಾತಿದಾರರಿಂದ ಸುಮಾರು ಶೇ. 20 ರಿಂದ 30 ರಷ್ಟು ಹೆಚ್ಚಿನ ಆಫರ್ ಗಳನ್ನು ಹೊಂದಿದ್ದೇವೆ. ಇದು ನಿಸ್ಸಂದೇಹವಾಗಿ 2018 ರಿಂದ ನಾವು ನೋಡಿದ ಅತ್ಯುತ್ತಮ ಬೇಸಿಗೆ ಪ್ಲೇಸ್ ಮೆಂಟ್ ಆಗಿದೆ” ಎಂದು ಅವರು ತಿಳಿಸಿದ್ದಾರೆ.

ಸಾಂಕ್ರಾಮಿಕದ ನಂತರ ಮಾರುಕಟ್ಟೆಯನ್ನು ನಿರ್ವಹಿಸಲು "ಆರ್ಥಿಕತೆಯು ಪುನರುಜ್ಜೀವನಗೊಳ್ಳುತ್ತಿದೆ ಮತ್ತು ಉದ್ಯಮವು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳನ್ನು ಹುಡುಕುತ್ತಿದೆ" ಎಂಬ ಸ್ಪಷ್ಟ ಸಂಕೇತವಾಗಿದೆ ಎಂದಿದ್ದಾರೆ.

ಅಕ್ಸೆಂಚರ್, ಮೆಕಿನ್ಸೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಂತಹ ಪ್ರಮುಖ ಕನ್ಸಲ್ಟಿಂಗ್ ಕಂಪನಿಗಳು ಸೇರಿದಂತೆ 181 ಆಫರ್ ಗಳನ್ನು ನೀಡಿವೆ. ಮಾಹಿತಿ ತಂತ್ರಜ್ಞಾನ ಮತ್ತು IT ಉತ್ಪನ್ನ ನಿರ್ವಹಣೆ ಡೊಮೇನ್‌ನಲ್ಲಿ 41 ಆಫರ್ ಗಳನ್ನು ನೀಡಿದ ಪ್ರಮುಖ ನೇಮಕಾತಿದಾರರಲ್ಲಿ ಮೈಕ್ರೋಸಾಫ್ಟ್, ಸ್ಯಾಮ್‌ಸಂಗ್ ಮತ್ತು ವಾಲ್‌ಮಾರ್ಟ್ ಗ್ಲೋಬಲ್ ಟೆಕ್. ಇ-ಕಾಮರ್ಸ್ ಸೇರಿವೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT