ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್ 

Nagaraja AB

ಬೆಂಗಳೂರು: ಮುಖ್ಯಮಂತ್ರಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳಿಗೆ ಕೋವಿಡ್-19 ಪಾಸಿಟಿವ್ ಸೋಮವಾರ ದೃಢಪಟ್ಟಿದೆ. ಇದರಿಂದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಯನ್ನು ರೇಸ್ ಕೋರ್ಸ್ ರಸ್ತೆಯ ಅಧಿಕೃತ ಕಚೇರಿಗೆ ಸ್ಥಳಾಂತರಿಸಲಾಗಿದೆ. 

ಕೃಷ್ಣಾದಲ್ಲಿ ಪೊಲೀಸ್ ಸಿಬ್ಬಂದಿ  ಸೇರಿದಂತೆ ಸುಮಾರು 50 ಸಿಬ್ಬಂದಿ ಮತ್ತು ವಿಧಾನಸೌಧದ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ 50 ನೌಕರರಿದ್ದಾರೆ. ಕುಮಾರ ಕೃಪಾ ರಸ್ತೆಯಲ್ಲಿನ ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದಇಬ್ಬರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ಹೇಳಿದೆ. ಆದರೆ, ಇವರಿಬ್ಬರಲ್ಲಿ ಒಬ್ಬರು ಅಧಿಕೃತ ಕೆಲಸಕ್ಕಾಗಿ ವಿಧಾನಸೌಧದ  ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿದ್ದು, ಅಲ್ಲೂ ಸೋಂಕು ಹರಡುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಭಾನುವಾರ ಮತ್ತು ಸೋಮವಾರ ಕಚೇರಿಗಳಿಗೆ ರಜೆ ಇತ್ತು ಮೂಲಗಳು ಹೇಳಿವೆ.

ಮಂಗಳವಾರ ಕೃಷ್ಣಾದಲ್ಲಿ ನಿಗದಿಯಾಗಿದ್ದ ಎಲ್ಲಾ ಸಭೆಗಳನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಬೊಮ್ಮಾಯಿ ಮತ್ತು ಅವರ ಎಲ್ಲಾ ಸಿಬ್ಬಂದಿ ಪರೀಕ್ಷಿಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಕೃಷ್ಣಾ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಆದರೆ, ವಿಧಾನಸೌಧದ ಸಿಎಂಒ ಕಚೇರಿ ಕಚೇರಿಯನ್ನು ಮಾಡಿಲ್ಲ. ಸ್ಯಾನಿಟೈಸ್ ಗಾಗಿ ಡಿಪಿಎಆರ್ ನನ್ನು ಕೋರಿರುವುದಾಗಿ ಮೂಲಗಳು ಹೇಳಿವೆ. 

ರಾಜ್ಯದಲ್ಲಿ ಕಳೆದ ಕೆಲವು ವಾರಗಳಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳ ಸಂಖ್ಯೆ ಕಡಿಮೆಯಾಗಿದೆ. ಸೋಮವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಸಾವಿರಕ್ಕಿಂತ ಕಡಿಮೆಯಿದ್ದರೆ ಚೇತರಿಕೆ ದರ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆಯಿದೆ. ಕಳೆದ ವಾರ ಪಾಸಿಟಿವ್ ಹೊಂದಿದ್ದ ಕೃಷ್ಣಾದ ಅಧಿಕಾರಿಯೊಬ್ಬರಿಗೆ ಎರಡು ಬಾರಿ ನೆಗೆಟಿವ್ ಬಂದಿದೆ. ಕೃಷ್ಣಾದಲ್ಲಿನ ಬಹುತೇಕ ಅಧಿಕಾರಿಗಳಿಗೆ ನೆಗೆಟಿವ್ ವರದಿ ಬಂದಿರುವುದಾಗಿ ಮೂಲಗಳು ತಿಳಿಸಿವೆ.

SCROLL FOR NEXT