ರಾಜ್ಯ

ಕಮಿಷನ್ ದಂಧೆ ಬಗ್ಗೆ ಗುತ್ತಿಗೆದಾರರ ಸಂಘದ ದೂರಿನ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Sumana Upadhyaya

ಮೈಸೂರು: ಬಿಡಿಎ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಈ ಸರ್ಕಾರ ಅಧಿಕಾರದಲ್ಲಿರಲು ಯೋಗ್ಯತೆಯಿಲ್ಲ, ಹೀಗಾಗಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಭಾರತ ಸಂವಿಧಾನದ 356ನೇ ವಿಧಿಯಡಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ತರುವ ಎಲ್ಲಾ ಅವಕಾಶಗಳು ಇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಮಾತನಾಡಿದ ಅವರು, ಎಸಿಬಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಕೈಕೆಳಗೆ ಇದೆ. ಬಿಡಿಎಯಲ್ಲಿನ ಭ್ರಷ್ಟಾಚಾರ ಮತ್ತು ಇತ್ತೀಚೆಗೆ ಸರ್ಕಾರವೇ ಎಸಿಬಿಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿಸಿದೆ. ಪ್ರಧಾನಿ ಮೋದಿಗೆ ಗುತ್ತಿಗೆದಾರರ ಸಂಘದಿಂದ ದೂರು ಹಿನ್ನೆಲೆ, ಸುಪ್ರೀಂ ಕೋರ್ಟ್​ ಜಡ್ಜ್​​ ಅವರಿಂದ ವಿಚಾರಣೆ ಆಗಲಿ, ಯಾರು ಲಂಚ ತೆಗೆದುಕೊಂಡಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

ನಾವು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆ ಅಸೋಸಿಯೇಷನ್ ನವರು ಪತ್ರ ಬರೆದಿದ್ದರೇ. ನಿರ್ದಿಷ್ಟ ಘಟನೆಗಳು ಇಲ್ಲ ಅಂದ ಮೇಲೆ ಕಾರ್ಯದರ್ಶಿಗಳಿಗೆ ಏಕೆ ಸರ್ಕಾರ ಕೊಟ್ಟಿದೆ. ರಾಜ್ಯದ ಸಂಸದರು, ಸಚಿವರು, ಶಾಸಕರು ಶೇಕಡಾ 40ರಷ್ಟು ಕಮಿಷನ್ ನ್ನು ಗುತ್ತಿಗೆಯಲ್ಲಿ ಪಡೆಯುತ್ತಿದ್ದಾರೆ ಎಂದು ಗುತ್ತಿಗೆ ಅಸೋಸಿಯೇಷನ್ ನ ಅಧ್ಯಕ್ಷ ಕೆಂಪಣ್ಣನವರೇ ಪತ್ರ ಬರೆದು ಮಾಧ್ಯಮಗಳ ಮುಂದೆಯೇ ಹೇಳಿದ್ದು ವರದಿಯಾಗಿದೆ ಎಂದರು.

SCROLL FOR NEXT