ರಾಜ್ಯ

ಒಮಿಕ್ರಾನ್ ವೈರಸ್ ಮುಂದಿನ ಬೆಳವಣಿಗೆ ನೋಡಿ ಅಗತ್ಯಬಿದ್ದರೆ ಲಾಕ್ ಡೌನ್: ಕೆಎಸ್ ಈಶ್ವರಪ್ಪ

Shilpa D

ಮಂತ್ರಾಲಯ: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ರೂಪಾಂತರಿ ಒಮಿಕ್ರಾನ್ ಹೊಸ ಕೋವಿಡ್ ಸೋಂಕಿನ ಬಗ್ಗೆ ಮುಂದಿನ ಬೆಳವಣಿಗೆ ಕಾದು ನೋಡಿ, ಅಗತ್ಯಬಿದ್ದರೆ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್ .ಈಶ್ವರಪ್ಪ ಹೇಳಿದ್ದಾರೆ.

ಮಂತ್ರಾಲಯದಲ್ಲಿ ಮಾತನಾಡಿದ ಸಚಿವರು, ಸರಕಾರ ಇದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಿದೆ ಮತ್ತು ಲಾಕ್ಡೌನ್ ಜಾರಿಗೆ ಮುನ್ನ ಎಲ್ಲಾ ಸಾಧಕ-ಬಾಧಕ ಅಂಕಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಿದೆಯೇ ಹೊರತು ಅವಸರ ಮತ್ತು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದರು.

ಡೇಂಜರಸ್ ವೈರಸ್ ಒಮಿಕ್ರಾನ್ ನ ಮುಂದಿನ ಬೆಳವಣಿಗೆಗಳನ್ನು ನೋಡಿ ಒಂದು ವಾರದಲ್ಲಿ ಅವಶ್ಯಕತೆ ಬಿದ್ದರೆ ಲಾಕ್ ಡೌನ್ ಮಾಡಲಾಗುತ್ತದೆ, ಜನರಿಗೆ ತೊಂದರೆ ಮಾಡಲು ಲಾಕ್ ಡೌನ್ ಮಾಡುವುದಿಲ್ಲ, ಜನರ ಜೀವವನ್ನು ರಕ್ಷಿಸಲು, ಜನ ಸಂತೋಷವಾಗಿ ಬದುಕಬೇಕು ಎಂಬ ಕಾರಣಕ್ಕೆ ಲಾಕ್ ಡೌನ್ ಮಾಡುತ್ತೇವೆ, ಅಗತ್ಯ ಬಿದ್ದರೆ ಮಾತ್ರ ಲಾಕ್ ಡೌನ್ ಮಾಡುವುದಾಗಿ ತಿಳಿಸಿದ್ದಾರೆ.

SCROLL FOR NEXT