ಸಾಂದರ್ಭಿಕ ಚಿತ್ರ 
ರಾಜ್ಯ

ವಯಸ್ಸಿಗೆ ಬಾರದ ಹುಡುಗಿಗೆ ಓದು ಬಿಟ್ಟು ಮದುವೆ ಮಾಡಿಕೊಳ್ಳುವಂತೆ ಪೋಷಕರ ಒತ್ತಾಯ: ಹೈಕೋರ್ಟ್ ನಿಂದ ರಕ್ಷಣೆ

ಓದು ನಿಲ್ಲಿಸಿ ಬಲವಂತದಿಂದ ಮದುವೆ ಮಾಡಿಸಲು ಪೋಷಕರು ಒತ್ತಾಯಿಸುತ್ತಿದ್ದ ಇನ್ನೂ ವಯಸ್ಸಿಗೆ ಬಾರದ ಹುಡುಗಿಯನ್ನು ಹೈಕೋರ್ಟ್ ರಕ್ಷಿಸಿದೆ.

ಬೆಂಗಳೂರು: ಓದು ನಿಲ್ಲಿಸಿ ಬಲವಂತದಿಂದ ಮದುವೆ ಮಾಡಿಸಲು ಪೋಷಕರು ಒತ್ತಾಯಿಸುತ್ತಿದ್ದ ಇನ್ನೂ ವಯಸ್ಸಿಗೆ ಬಾರದ ಹುಡುಗಿಯನ್ನು ಹೈಕೋರ್ಟ್ ರಕ್ಷಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ,  ಹೆಚ್ಚಿನ ಅಧ್ಯಯನವವನ್ನು ಮುಂದುವರೆಸಲು ಬಯಸಿದ್ದ ಇನ್ನೂ 18 ವರ್ಷ ತುಂಬದ ಗದಗ ಜಿಲ್ಲೆಯ ಹುಡುಗಿಗೆ ಮದುವೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಆಕೆ ಗೋವಾಕ್ಕೆ ಹೋಗಿ ತನ್ನ ಸಹೋದರನೊಂದಿಗೆ ಇರಲು ಪ್ರಾರಂಭಿಸಿದ್ದಳು.

ಆದಾಗ್ಯೂ. ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ತೆರಳಿದ ತಾಯಿಯ ಪರವಕೀಲರು, ಹುಡುಗಿಯನ್ನು ಅಪಹರಿಸಲಾಗಿತ್ತು ಎಂದು ವಾದಿಸಿದರು. ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.  ಇದೇ ವೇಳೆ ಆ ಹುಡುಗಿಯ ಪೋಷಕರು ತಮ್ಮ ಮಗಳ ಮದುವೆಗೆ ಒತ್ತಡ ಹೇರುವುದಿಲ್ಲ ಅಥವಾ ಓದು ನಿಲ್ಲಿಸುವಂತೆ ಮನವಿ ಮಾಡಿದ್ದು, ಆಕೆಯನ್ನು ತಮ್ಮೊಂದಿಗೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ, ನ್ಯಾಯಾಲಯಕ್ಕೆ ಹಾಜರಾದ ಹುಡುಗಿ, ತನಗೆ ಅವರೊಂದಿಗೆ ಹೋಗಲು ಇಷ್ಟವಿಲ್ಲ ಮತ್ತು ಬಾಲಾಪರಾಧಿ ಕೇಂದ್ರಕ್ಕೆ ಹೋಗಲು ಸಿದ್ಧಳಾಗಿರುವುದಾಗಿ ಹೇಳಿದ್ದಾಳೆ. 

ಆ ಹುಡುಗಿಯ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಎಸ್ ರಾಚಯ್ಯ ಅವರಿದ್ದ ವಿಭಾಗೀಯ ಪೀಠ, ಆಕೆಯನ್ನು ಗದಗನಲ್ಲಿರುವ ಗರ್ಲ್ಸ್  ಹೋಮ್ ಗೆ ಕಳುಹಿಸುವಂತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಸೂಚಿಸಿದೆ.

ಆಕೆ ಪ್ರೌಢಿಮೆಗೆ ಬರುವವರೆಗೆ ಅಥವಾ ಅವಳು ತನ್ನ ಹೆತ್ತವರೊಂದಿಗೆ ಇರಲು  ತನ್ನ ಮನಸ್ಸನ್ನು ಬದಲಾಯಿಸುವವರೆಗೆ ಗರ್ಲ್ಸ್  ಹೋಮ್ ನಲ್ಲಿ ಇರಬೇಕು, ಆಕೆ ತನ್ನ ಅಧ್ಯಯನವನ್ನು ಮುಂದುವರಿಸುವುದನ್ನು ಗರ್ಲ್ಸ್  ಹೋಮ್  ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಒಂದು ವೇಳೆ ತಮ್ಮ ಪೋಷಕರು ನೋಡಲು ಆ ಹುಡುಗಿ ಬಯಸಿದರೆ ಬಾಲಾಪರಾಧಿ ಪ್ರಾಧಿಕಾರವು ಭೇಟಿ ನೀಡುವ ಹಕ್ಕುಗಳನ್ನು ನೀಡಬೇಕು ಎಂದು  ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT