ರಾಜ್ಯ

ದಸರಾ ಉದ್ಘಾಟನೆ: ಎಸ್.ಎಂ.ಕೃಷ್ಣ ಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ

Srinivasamurthy VN

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಗೌರವ ನೀಡಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಪ್ರತಿಪಾದಿಸಿದ್ದಾರೆ.

ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಅಶೋಕ್ ಅವರಿಂದ 2021ರ ಸಾಲಿನ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಲಿ. ನನ್ನ ವ್ಯಕ್ತಿತ್ವ ರೂಪಿಸಸಲು ರಾಮಕೃಷ್ಣ ಆಶ್ರಮ ಬಹಳ ಪ್ರಭಾವ ಬೀರಿದೆ. ನನ್ನ ಶಾಲೆ ಮತ್ತು ಕಾಲೇಜು ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಇದೀಗ ದಸರಾ ಉದ್ಘಾಟನೆ ಮಾಡುವ ಸುಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.ಇಂತಹ ಅವಕಾಶ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಹಾಗೂ ಸಚಿವ ಸಂಪುಟದ ಎಲ್ಲರಿಗೂ ಅಭಿನಂದನೆಗಳುಎಂದು ಹೇಳಿದರು. 

ಎಸ್.ಎಂ. ಕೃಷ್ಣ ಅವರಿಗೆ ಆಭಾರಿ: ಸಿಎಂ ಬೊಮ್ಮಾಯಿ
ದಸರಾ ಉದ್ಘಾಟನೆಗೆ ಎಂ.ಎಂ.ಕೃಷ್ಣರನ್ನು ಆಹ್ವಾನಿಸಿದ್ದೇವೆ. ಕನ್ನಡಿಗರಿಗೆ ಪ್ರೀತಿಯ ವ್ಯಕ್ತಿ ಇವರು, ನಮಗೆಲ್ಲಾ ಆದರಣೀಯ. ಎಸ್.ಎಂ.ಕೃಷ್ಣ ನಮ್ಮ ಆಮಂತ್ರಣ ಒಪ್ಪಿಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿ. ಹೀಗಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರು ದಸರಾ ಉದ್ಘಾಟನೆ ಹೊಣೆ ನೀಡಿದ್ದಕ್ಕೆ ಅಭಿನಂದನೆ
ಮೈಸೂರು ದಸರಾ ಉದ್ಘಾಟನೆ ಹೊಣೆ ಹೊರಿಸಿದ್ದಾರೆ. ದಸರಾ ಉದ್ಘಾಟಿಸಲು ಅವಕಾಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ರಾಜ್ಯ ಸರ್ಕಾರಕ್ಕೆ ಎಸ್.ಎಂ.ಕೃಷ್ಣ ಹೇಳಿದರು. ಸಿಎಂ ಬೊಮ್ಮಾಯಿ ಉತ್ತಮ ಆಡಳಿತವನ್ನು ಕೊಡ್ತಿದ್ದಾರೆ ಎಂದೂ ಸಿಎಂ ಬಸವರಾಜ ಬೊಮ್ಮಾಯಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ನನ್ನ ವ್ಯಕ್ತಿತ್ವ ಪೋಷಣೆ, ರೂಪಿಸಿಕೊಳ್ಳಲು ಮೈಸೂರು ಮತ್ತು ಅಲ್ಲಿನ ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ತಿಳಿಸಿದರು.

SCROLL FOR NEXT