ಹತ್ಯೆಗೊಳಗಾದ ಯುವಕ ಮುಲ್ಲಾ 
ರಾಜ್ಯ

ಬೆಳಗಾವಿ: ಅನ್ಯ ಧರ್ಮದ ಯುವತಿಯೊಂದಿಗೆ ಪ್ರೇಮ, ಮುಸ್ಲಿಂ ಯುವಕನ ಹತ್ಯೆ

ಖಾನಪುರದ ರೈಲ್ವೆ ಹಳಿಯ ಮೇಲೆ  24 ವರ್ಷದ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಆತನನ್ನು ಹತ್ಯೆ ಮಾಡಿರಬಹುದೆಂಬ ಅನುಮಾನ ಉಂಟಾಗಿದೆ.  

ಬೆಳಗಾವಿ: ಖಾನಪುರದ ರೈಲ್ವೆ ಹಳಿಯ ಮೇಲೆ  24 ವರ್ಷದ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಆತನನ್ನು ಹತ್ಯೆ ಮಾಡಿರಬಹುದೆಂಬ ಅನುಮಾನ ಉಂಟಾಗಿದೆ.  

ಮೃತನನ್ನು ಅರ್ಬಾಜ್ ಅಫ್ತಾಬ್ ಮುಲ್ಲಾ ಎಂದು ಗುರುತಿಸಲಾಗಿದೆ.  ಈತ ಬೇರೆ ಧರ್ಮಕ್ಕೆ ಸೇರಿದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಐಪಿಸೆ ಸೆಕ್ಷನ್ 302ರ ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಆತ ಬೇರೆ ಧರ್ಮಕ್ಕೆ ಸೇರಿದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಲ್ಲಾ ಕೆಲಸಕ್ಕಾಗಿ ಪ್ರತಿದಿನ ಬೆಳಗಾವಿಯಿಂದ ರೈಲಿನಲ್ಲಿ ಓಡಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಲ್ಲಾ ಪ್ರೀತಿಸುತ್ತಿದ್ದ ಹುಡುಗಿ ಕಡೆಯವರು ಆತನನ್ನು ಕೊಲೆ ಮಾಡಿರುವುದಾಗಿ ಯುವಕನ ತಾಯಿ ನಜೀಮಾ ಶಾಯಿಕ್ ಆರೋಪಿಸಿದ್ದಾರೆ. 

ಹುಡುಗಿಯಿಂದ ಬೇರೆಯಾಗುವಂತೆ ಬಿಜ್ರೆ ಮತ್ತು ಮಹಾರಾಜ್ ಸೇರಿದಂತೆ ಕೆಲವು ಜನರು ಕೆಲ ದಿನಗಳಿಂದ ತನ್ನ ಮಗನಿಗೆ ಬೆದರಿಕೆ ಹಾಕುತ್ತಿದ್ದರು.ಯುವತಿಯನ್ನು ತಡೆಯುವಂತೆ ಆಕೆಯ ತಾಯಿಯೊಂದಿಗೂ ಮಾತನಾಡಿದ್ದೆ ಆದರೆ, ಮುಲ್ಲಾ ಹಾಗೂ ಯುವತಿ ಮಾತು ಕೇಳುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.  ಪ್ರಾಥಮಿಕ ತನಿಖೆ ನಡೆಸಿದ ರೈಲ್ವೆ ಪೊಲೀಸರು, ಈ ವಿಚಾರವನ್ನು ಬೆಳಗಾವಿ ಜಿಲ್ಲಾ ಪೊಲೀಸರಿಗೆ ವರ್ಗಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್