ಮರದ ಕೆಳಗೆ ಕುಳಿತಿರುವ ಕ್ಯಾತಗನಚರುಲು ಗ್ರಾಮಸ್ಥರು (ಟಿಎನ್ಐಇ ಚಿತ್ರ) 
ರಾಜ್ಯ

ಪಾವಗಡದ ಸೋಲಾರ್ ಪಾರ್ಕ್ ಮೂಡಿಸಿದ್ದು ಕೆಲವರ ಜೀವನದಲ್ಲಿ ಬೆಳಕು, ಹಲವರ ಜೀವನದಲ್ಲಿ ಕತ್ತಲು

ಪಾವಗಡದಲ್ಲಿನ ಬೃಹತ್ ಸೋಲಾರ್ ಪಾರ್ಕ್ ಯೋಜನೆಯಿಂದಾಗಿ ಹಲವಾರು ಅಭಿವೃದ್ಧಿ, ಉತ್ತಮ ರಸ್ತೆ, ವಿದ್ಯುತ್ ಈ ಭಾಗಕ್ಕೆ ದೊರೆತಿವೆ ಇದು ಒಂದು ಮುಖವಷ್ಟೆ.

ಪಾವಗಡ: ಪಾವಗಡದಲ್ಲಿನ ಬೃಹತ್ ಸೋಲಾರ್ ಪಾರ್ಕ್ ಯೋಜನೆಯಿಂದಾಗಿ ಹಲವಾರು ಅಭಿವೃದ್ಧಿ, ಉತ್ತಮ ರಸ್ತೆ, ವಿದ್ಯುತ್ ಈ ಭಾಗಕ್ಕೆ ದೊರೆತಿವೆ ಇದು ಒಂದು ಮುಖವಷ್ಟೆ. ತಮ್ಮ ಜಮೀನುಗಳನ್ನು ಸೋಲಾರ್ ಪಾರ್ಕ್ ಗಳಿಗೆ ನೀಡಿ ಬೆಳೆ ಬೆಳೆಯುತ್ತಿದ್ದ ಭೂಮಿಯಲ್ಲಿ ಪ್ಯಾನಲ್ ಗಳನ್ನು ಅಳವಡಿಸಿದ್ದರಿಂದ ಉಂಟಾಗಿರುವ ಪರಿಣಾಮಗಳ ಮತ್ತೊಂದು ಮುಖ ಈಗ ಅನಾವರಣಗೊಂಡಿದೆ. 

ತಮ್ಮ 6 ಎಕರೆ ಭೂಮಿಯಲ್ಲಿ ಈ ವರೆಗೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಮುನಿಯಪ್ಪ ರೆಡ್ಡಿ ಈಗ ನಿರಾತಂಕವಾಗಿ ಅಮಲೇರಿಸಿಕೊಂಡು ಆಲದ ಮರದ ಕೆಳಗೆ ಧೂಮಪಾನ ಮಾಡುತ್ತಾ ಕುಳಿತಿರುವ ದೃಶ್ಯ ಈಗೀಗ ಸಾಮಾನ್ಯವಾಗಿದ್ದರೆ ಆತನ ಪುತ್ರಿ ಹಾಗೂ ಪತ್ನಿ ಇಬ್ಬರೂ ಗಡಿ ಭಾಗವನ್ನು ದಾಟಿ ಆಂಧ್ರಪ್ರದೇಶಕ್ಕೆ ತೆರಳಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಏಷ್ಯಾದಲ್ಲೇ ದೊಡ್ಡ ಸೋಲಾರ್ ಪಾರ್ಕ್- ಶಕ್ತಿ ಸ್ಥಳಕ್ಕೆ ಭೂಮಿ ನೀಡಿದ ಹಲವಾರು ಸಣ್ಣ ಹಾಗೂ ಮಧ್ಯಮ ಕೃಷಿಕರ ಈಗಿನ ಸ್ಥಿತಿಯಾಗಿದೆ.

ಒಮ್ಮೆ ಸರ್ಕಾರ ಕೃಷಿಕರಿಂದ ಸೋಲಾರ್ ಫಲಕಗಳಿಗಾಗಿ ಭೂಮಿ ಪಡೆದರೆ, ಆ ಭೂ ಮಾಲಿಕರಿಗೆ ವಾರ್ಷಿಕ ಪ್ರತಿ ಎಕರೆಗೆ 23,000 ರೂಪಾಯಿ ಗುತ್ತಿಗೆ ಹಣವನ್ನು ನೀಡುತ್ತದೆ. ಗ್ರಾಮಸ್ಥರಿಗೆ ಈಗ 24 ಗಂಟೆಗಳ ವಿದ್ಯುತ್ ಲಭಿಸುತ್ತದೆ. ಸುಂದರವಾದ ಮನೆಗಳು ನಿರ್ಮಾಣವಾಗಿದೆ. ಉತ್ತಮವಾದ ರಸ್ತೆಗಳು ನಿರ್ಮಾಣವಾಗಿದ್ದರೂ ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಕೊರತೆ ಇದ್ದೇ ಇದೆ.

ಭೂಮಿ ಇಲ್ಲದೇ ಇರುವವರು ಸ್ಥಳೀಯವಾಗಿ ಯಾವುದೇ ಕೃಷಿ ಚಟುವಟಿಕೆ ಇಲ್ಲದ ಪರಿಣಾಮವಾಗಿ ನೌಕರಿ ಇಲ್ಲದೇ ಸಾಲದ ಸುಳಿಯಲ್ಲಿ ಸುಲುಕಿಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಕಾರ್ಮಿಕರು ಉದ್ಯೋಗ ಹುಡುಕಿ ಗಡಿ ಭಾಗಗಳಿಗೆ ತೆರಳುತ್ತಿದ್ದಾರೆ. 

ಪಾವಗಡ ತಾಲೂಕಿನ ವಲ್ಲೂರ್, ತಿರುಮನಿ, ಬಾಲಸಮುದ್ರಮ್, ಕ್ಯಾತಗಂಚರುಲು, ರಾಯಚರುಲು ಗ್ರಾಮಗಳಲ್ಲಿ ಸರ್ಕಾರ ಒಟ್ಟಾರೆ 12,800 ಎಕರೆಯಷ್ಟು ಭೂಮಿಯನ್ನು ಸೋಲಾರ್ ಪಾರ್ಕ್ ಗಾಗಿ ಪಡೆದುಕೊಂಡಿದೆ.

"ಈ ಪ್ರದೇಶಗಳಲ್ಲಿನ ಬಹುತೇಕ ಮಹಿಳೆಯರು ಪ್ರತಿದಿನವೂ ಕೃಷಿ ಭೂಮಿಯಲ್ಲಿ ದುಡಿಯುವುದಕ್ಕೆ ಆಂಧ್ರಪ್ರದೇಶಕ್ಕೆ ತೆರಳಬೇಕಾಗುತ್ತದೆ. 15 ವಾಹನಗಳಲ್ಲಿ ತೆರಳುವ ಮಹಿಳೆಯರು 4 ಗಂಟೆಗಳ ಕಾಲ ಪ್ರಯಾಣ ಮಾಡಿದರೂ ದಿನಕ್ಕೆ ಸಂಪಾದನೆಯಾಗುವುದು 200-300 ರೂಪಾಯಿಗಳಷ್ಟೇ ಎನ್ನುತ್ತಾರೆ" ವಲ್ಲೂರಿನ ಈಶ್ವರಮ್ಮ.

ಸೋಲಾರ್ ಪಾರ್ಕ್ ಗಳಿಗೆ ಭೂಮಿ ನೀಡಿರುವ ಮಾಲಿಕರು ಅಲ್ಲಿನ ಕೆಲಸಗಳಿಗೆ ಅವರದ್ದೇ ಸಮುದಾಯದ ಜನರನ್ನು ಕಳಿಸುತ್ತಾರೆ. ನಮ್ಮ ಮನೆಯವರಿಗೆ ಸೋಲಾರ್ ಪಾರ್ಕ್ ಗಳಲ್ಲಿ ಉದ್ಯೋಗ ಸಿಗುತ್ತಿಲ್ಲ. ಬೃಹತ್ ಪ್ರಮಾಣದಲ್ಲಿ ಭೂಮಿ ಹೊಂದಿರುವವರು ಅವರದ್ದೇ ಆದ ಲೇಬರ್ ಏಜೆಂಟ್ ಗಳನ್ನು ಹೊಂದಿದ್ದಾರೆ. ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳನ್ನು ಪಡೆಯುವುದಕ್ಕೂ ಮನವಿ ಮಾಡಿ ಸಾಕಾಗಿದೆ. ಅನಿವಾರ್ಯವಾಗಿ ನಮ್ಮ ಮಕ್ಕಳನ್ನು ಬಯಲು ಶೌಚಕ್ಕೇ ಕಳಿಸುತ್ತಿದ್ದೇವೆ ಎಂದು ಇದೇ ಗ್ರಾಮದ ಕಮಲಮ್ಮ.

ಭೂಮಿಯನ್ನು ಹೊಂದಿರದ ಕೃಷಿ ಕಾರ್ಮಿಕರು ತಮಗೂ ಸೋಲಾರ್ ಪಾರ್ಕ್ ಗಳಲ್ಲಿ ನೌಕರಿ ಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಕಂಪನಿಗಳು ತಮಗೆ ನೌಕರಿ ನೀಡುತ್ತಿಲ್ಲವೆಂಬುದು ಅವರ ಆರೋಪ. ಕೆಲವೇ ಕೆಲವು ಮಂದಿಯನ್ನು ಸೆಕ್ಯುರಿಟಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದ್ದು ತಿಂಗಳಿಗೆ 12,000 ವೇತನ ನೀಡಲಾಗುತ್ತಿದೆ.

ಟಿಎನ್ಐಇ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಂಡಿದ್ದು, ಹೆಚ್ಚು ಭೂಮಿ ಹೊಂದಿರುವವರು ಈ ಯೋಜನೆಯಿಂದ ಬರುತ್ತಿರುವ ಲಾಭದಿಂದ ಸಂತುಷ್ಟರಾಗಿದ್ದಾರೆ. 5 ಎಕರೆಗಳನ್ನು ಹೊಂದಿರುವ ಕೃಷಿಕರಿಗೆ ಒಳ್ಳೆಯ ಲಾಭವಿದೆ. ಆದರೆ 2-3 ಎಕರೆಗಳಷ್ಟು ಭೂಮಿ ಇರುವ ಸಣ್ಣ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ದುಡಿಯುವುದಕ್ಕೆ ಗಡಿಗಳನ್ನು ದಾಟಿ ಹೋಗಬೇಕೆನ್ನುತ್ತಿದ್ದಾರೆ ಸ್ಥಳಿಯರು.

ತಾಲೂಕಿನ ಹಿರಿಯರು ಹೇಳುವ ಪ್ರಕಾರ, ಈ ಹಿಂದೆ ಹೆಚ್ಚು ಭೂಮಿ ಹೊಂದಿದ್ದ ಮಾಲಿಕರು ಸಿಹಿ ನಿಂಬೆ, ಕಡಲೆಕಾಯಿ, ಸೀತಾಫಲ ಮತ್ತು ತೊಗರಿ ಬೇಳೆಗಳನ್ನು ಬೆಳೆಯುತ್ತಿದ್ದದ್ದು ಈಗ ಸೋಲಾರ್ ಪಾರ್ಕ್ ಬಂದ ನಂತರ ಮಾಯವಾಗಿದೆ. ಇದಕ್ಕೂ ಮುನ್ನ ಕಡಲೆಕಾಯಿ ಎಣ್ಣೆ ಮಿಲ್ ಗಳಿದ್ದವು. ಮಳೆ ಕಡಿಮೆಯಾದರೂ ಹೈನುಗಾರಿಕೆ, ರೇಷ್ಮೆಗಳಂತಹ ಇತರ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿರುವ ಗ್ರಾಮಗಳಲ್ಲಿ ಈಗ ಇದ್ಯಾವುದರ ಗುರುತೂ ಇಲ್ಲ. ಹಸಿರು ಇಲ್ಲದೇ ಹೈನುಗಾರಿಕೆಯೂ ಮಾಯವಾಗಿದ್ದು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ  ಹಾಲನ್ನು ಪೊಟ್ಟಣಗಳಲ್ಲಿ ಖರೀದಿಸಲಾಗುತ್ತಿದೆ ಎನ್ನುತ್ತಾರೆ ಅಚ್ಚಮನಹಳ್ಳಿಯ ಶಿವಪ್ಪ

ಗ್ರಾಮಗಳಲ್ಲಿ ಸಹಕ ಕೃಷಿ ಚಟುವಟಿಕೆಗಳು ಮಾಯವಾಗಿರುವುದರಿಂದ ಜೀವನ ಶೈಲಿಯಲ್ಲಿ ಸಂಪೂರ್ಣ ಬದಲಾವಣೆಯಾಗಿರುವುದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಿದ್ದು ಹೈಪರ್ ಟೆನ್ಷನ್, ಮಧುಮೇಹದಂತಹ ಆರೋಗ್ಯದ ಸಮಸ್ಯೆಗಳೂ ತಲೆದೋರುತ್ತಿವೆ. ಬೀದಿ ದೀಪ, ಉತ್ತಮ ರಸ್ತೆಗಳು, ನಿರಂತರ ವಿದ್ಯುತ್ ನಂತಹ ಸೌಲಭ್ಯಗಳು ಇವೆಯಾದರೂ, ಉತ್ತಮ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೋರ್ ವೆಲ್ ಗಳ ನೀರಿನ ಮೇಲೆ ಇಲ್ಲಿನ ಜನತೆ ಅವಲಂಬಿತರಾಗಿದ್ದು ಫ್ಲೋರೇಡ್ ಅಂಶ ಹೆಚ್ಚಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT