ರಾಜ್ಯ

ಹಾಸನ: ಹತ್ತು ದಿನ ಹಾಸನಾಂಬ ದೇವಾಲಯ ಓಪನ್; ಈ ವರ್ಷವೂ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ

Nagaraja AB

ಹಾಸನ: ಈ ವರ್ಷ ಅಕ್ಟೋಬರ್ 28 ರಿಂದ ಹಾಸನದಲ್ಲಿನ ಪ್ರಸಿದ್ಧ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಸರಳ ರೀತಿಯಲ್ಲಿ ಆಚರಣೆಗಳು ನಡೆಯಲಿವೆ.

ದಶಕಗಳಿಂದಲೂ ಪೂಜೆ ನಡೆಸುತ್ತಿರುವ ಮುಖ್ಯ ಆರ್ಚಕ ನಾಗರಾಜ್ ನೇತೃತ್ವದಲ್ಲಿನ ಆರ್ಚಕರ ಗುಂಪಿನಿಂದ ಸಾಂಪ್ರದಾಯಿಕ ಪೂಜಾ, ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಕೋವಿಡ್- 19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ವರ್ಷವೂ ಸಾರ್ವಜನಿಕರು ದೇವಾಲಯ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಹಾಸನಾಂಬ ಕಾರು ಆಚರಣೆ ಮತ್ತು ವಾರ್ಷಿಕ ಮೇಳಗಳನ್ನು ಕೂಡಾ ನಿಷೇಧಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರಳ ರೀತಿಯ ಆಚರಣೆಗೆ ಕಂದಾಯ, ಪೊಲೀಸ್ ಮತ್ತು ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರ್ಶಕ್ಕೆ ಒಂದು ಬಾರಿ ಹಾಸನಾಂಬ ದೇವಾಲಯ ತೆರೆಯಲಿದ್ದು, ರಾಜ್ಯ ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಾರೆ. ತಮ್ಮಗೆ ಒಳಿತು ಮಾಡುವಂತೆ  ಚಿನ್ನ, ಬೆಳ್ಳಿ, ಸೀರೆ, ಬಳೆ, ನಗದು ಸೇರಿದಂತೆ ಮತ್ತಿತರ ವಸ್ತುಗಳನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಪ್ರತಿವರ್ಷ 1 ಕೋಟಿ ಗೂ ಅಧಿಕ ಆದಾಯ ಬರುವ ರಾಜ್ಯದ ದೇವಾಲಯಗಳಲ್ಲಿ ಈ ದೇವಾಲಯ ಕೂಡಾ ಒಂದಾಗಿದೆ. 

ದೇವಾಲಯದ ಬಾಗಿಲು ತೆರೆಯುವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ವರ್ಷವೂ ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

10 ದಿನಗಳ ಕಾಲ ಸಂಪ್ರದಾಯ ಮತ್ತು ಆಚರಣೆಯಲ್ಲಿ ಯಾವುದೇ ರಾಜೀಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.  ಶಾಂತಿಯುತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ. 

SCROLL FOR NEXT