ರಾಜ್ಯ

ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

Nagaraja AB

ಬೆಂಗಳೂರು: ಬೆಂಗಳೂರು ನಗರದಾದ್ಯಂತ ರಸ್ತೆ ಗುಂಡಿಗಳನ್ನು ಭರ್ತಿ ಮಾಡುವ ಕಾಮಗಾರಿಯ ಗುಣಮಟ್ಟ ಖಚಿತಪಡಿಸಿಕೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ನಗರದ ರಸ್ತೆಗುಂಡಿ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಕಾಮಗಾರಿಯ ಗುಣಮಟ್ಟವು ಗುಂಡಿಗಳು 2-3 ತಿಂಗಳೊಳಗೆ ಮತ್ತೆ  ತೆರೆದುಕೊಳ್ಳದಂತೆ ಗಮನಹರಿಸುವಂತೆ ಸೂಚಿಸಿದೆ.

ಬಿಬಿಎಂಪಿ ಪರ  ವಕೀಲರು, ನಾಗರಿಕ ಸಂಸ್ಥೆ ಒಂದೇ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಪ್ರತಿದಿನವೂ ಕೆಲಸ ನಡೆಯುತ್ತಿದೆ. ಕಳೆದ 10-15 ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಬಿಬಿಎಂಪಿಯು ಎಲ್ಲಾ ಗುಂಡಿಗಳನ್ನು ತುಂಬುವ ಗುರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ವಿವರ ನೀಡಿದರು.
 

SCROLL FOR NEXT