ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರ ಬಂಧನ: 420 ಗ್ರಾಂ ಚಿನ್ನ ವಶ

Sumana Upadhyaya

ಬೆಂಗಳೂರು: ಶಾರ್ಜಾದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರಿಂದ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ 420 ಗ್ರಾಂಗಿಂತಲೂ ಹೆಚ್ಚಿನ ತೂಕದ ಚಿನ್ನವನ್ನು ಏರ್‌ಪೋರ್ಟ್ ಕಸ್ಟಮ್ಸ್‌ನ ವಾಯು ಗುಪ್ತಚರ ಘಟಕ ವಶಪಡಿಸಿಕೊಂಡಿದೆ.

ಚಿನ್ನವನ್ನು ಪ್ಯಾಂಟ್‌ಗಳಲ್ಲಿ, ಒಳ ಉಡುಪುಗಳ ಪೆಟ್ಟಿಗೆಗಳಲ್ಲಿ ಮತ್ತು ಅವರ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಮರೆಮಾಚಿ ತಂದಿದ್ದರು.ಮೊನ್ನೆ ಬುಧವಾರ ಏರ್ ಅರೇಬಿಯಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರಿಂದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಸುಕಿನ ಜಾವ 4 ಗಂಟೆ ಸುಮಾರಿಗೆ ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಪುಡಿ, ಬಳೆ ಮತ್ತು ಚಿನ್ನದ ಬಿಸ್ಕತ್ತು ಮಾದರಿಗಳಲ್ಲಿ ಒಟ್ಟು 421.45 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

47 ವರ್ಷದ ಆಂಧ್ರಪ್ರದೇಶದ ಕಡಪ ಮೂಲದವರಿಂದ 116.48 ಗ್ರಾಂ ತೂಕದ ಚಿನ್ನದ ಬಿಸ್ಕತ್ತುಗಳು ಮತ್ತು 126.88 ಗ್ರಾಂ ತೂಕದ 3 ಬಳೆಗಳನ್ನು ಪ್ಲಾಸ್ಟಿಕ್ ಚೆಕ್ ಇನ್ ಬ್ಯಾಗ್ ಒಳಗೆ ಮತ್ತು ಪ್ಯಾಂಟ್ ನ ಜೇಬಿನಲ್ಲಿ ಅಡಗಿಸಿಟ್ಟಿದ್ದರು. "ಶಂಕಾಸ್ಪದ ಪ್ರಯಾಣಿಕನನ್ನು ಓಡಿಸಿ ಅವನ ಬ್ಯಾಗೇಜ್ ನ್ನು ಸ್ಕ್ಯಾನ್ ಮಾಡಿದ್ದರಿಂದ ನಮಗೆ ಪತ್ತೆಹಚ್ಚಲು ಸಹಾಯವಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ಇನ್ನೊಂದು ಘಟನೆಯು ತಮಿಳುನಾಡಿನ ತಿರುಚಿರಾಪಳ್ಳಿಯ 52 ವರ್ಷದವನದಾಗಿತ್ತು. "ಪ್ರಯಾಣಿಕನು ತನ್ನ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಒಳ ಉಡುಪುಗಳಿಗೆ ಮತ್ತು ಪೆಟ್ಟಿಗೆಗಳಲ್ಲಿ ಇರಿಸಲಾಗಿರುವ ಪೇಪರ್ ಫಾಯಿಲ್‌ಗಳ ನಡುವೆ ಬಂಗಾರದ ಪುಡಿಯನ್ನು ಇರಿಸಿ ಕದ್ದೊಯ್ಯಲು ಯತ್ನಿಸಿದ್ದನು'' ಎಂದು ಅಧಿಕಾರಿಗಳು ಹೇಳುತ್ತಾರೆ., ಬ್ಯಾಗೇಜ್‌ಗಳ ಸ್ಕ್ಯಾನಿಂಗ್ ಅವುಗಳನ್ನು ಪತ್ತೆಹಚ್ಚಲು ಸಹಾಯ ಮಾಡಿತು. ಇವರು ಒಯ್ಯುತ್ತಿದ್ದ ಚಿನ್ನದ ಒಟ್ಟು ತೂಕ 178.09 ಗ್ರಾಂ ಆಗಿದ್ದು ಇದರ ಬೆಲೆ 8 ಲಕ್ಷದ 44 ಸಾವಿರದ 885 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT