ಸ್ಯಾಂಡಲ್ ವುಡ್ ಸಮಸ್ಯೆ ಪರಿಹಾರಕ್ಕೆ ಗೃಹಸಚಿವರಿಗೆ ಕೆಎಫ್‍ಸಿಸಿ ಮನವಿ 
ರಾಜ್ಯ

ಸ್ಯಾಂಡಲ್ ವುಡ್ ಸಮಸ್ಯೆ ಪರಿಹಾರಕ್ಕೆ ಗೃಹಸಚಿವರಿಗೆ ಕೆಎಫ್‍ಸಿಸಿ ಮನವಿ

ಚಂದನವನದಲ್ಲಿ ಪೈರಸಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಈ ಕುರಿತು ಗೃಹ ಸಚಿವರೊಡನೆ ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಬೆಂಗಳೂರು: ಚಂದನವನದಲ್ಲಿ ಪೈರಸಿ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಈ ಕುರಿತು ಗೃಹ ಸಚಿವರೊಡನೆ ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಬುಧವಾರ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ರವರನ್ನು ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ಮಾಡಿ ಉದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶಕ್ಕೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎನ್ ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ ಸಾ ರಾ ಗೋವಿಂದು ಮತ್ತಿತರರು ಉಪಸ್ಥಿತರಿದ್ದರು. ಕಳೆದ ವಾರವಷ್ಟೆ ತೆರೆ ಕಂಡಿರುವ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ಅಭಿನಯದ "ನಿನ್ನ ಸನಿಹಕೆ" ಸಿನಿಮಾ ಪೈರಸಿ ಆಗಿದ್ದು ಟೆಲಿಗ್ರಾಮ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಅಲ್ಲದೆ ಲೂಸ್ ಮಾದ ಯೋಗೇಶ್ ನಟಿಸಿರೋ ಲಂಕೆ, ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಹಾಗೂ ನಟ ಚೇತನ್ ಚಂದ್ರ ಅಭಿನಯಿಸಿರೋ ಶಾರ್ದೂಲ ಚಿತ್ರ ಕೂಡ ಪೈರಸಿಯಾಗಿದೆ. ಕೇವಲ ಪೈರಸಿ ಮಾತ್ರವಲ್ಲದೆ ಇನ್ನಿತರ ಸಮಸ್ಯೆಗಳ ಚರ್ಚಿಸಲು ಕರ್ನಾಟಕ ವಾಣಿಜ್ಯ ಮಂಡಳಿ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT