ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ದಸರಾ ಪಾರ್ಟಿಯಲ್ಲಿ ಗಲಾಟೆ; ಯುವಕನ ಹತ್ಯೆ

ದಸರಾ ಹಬ್ಬದ ಪ್ರಯುಕ್ತ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಧನುಷ್ ಕೊಲೆಯಾದ ಯುವಕ. ಮಂಗಳೂರಿನ ಪಂಪ್​ವೆಲ್ ಬಳಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಧನುಷ್ ಕೊಲೆಯಾದ ಯುವಕ. ಮಂಗಳೂರಿನ ಪಂಪ್​ವೆಲ್ ಬಳಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.

ಅ.15 ರಂದು ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಸೇರಿ ಒಟ್ಟು ಆರು ಜನ ಗೆಳೆಯರು ಜೊತೆಗೂಡಿ ಲಾಡ್ಜ್​ನಲ್ಲಿ ಪಾರ್ಟಿ ಮಾಡುತ್ತಿದ್ದರು.ರಾತ್ರಿ 2 ಗಂಟೆ ಸುಮಾರಿಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಪಚ್ಚನಾಡಿ ಎಂಬುವರ ಮಧ್ಯೆ ಜಗಳ ಆರಂಭವಾಗಿದೆ.

ಗಲಾಟೆ ತಾರಕ್ಕೇರಿದ ಪರಿಣಾಮ ಈ ವೇಳೆ ಜೇಸನ್ ಹರಿತವಾದ ಆಯುಧದಿಂದ ಧನುಷ್​ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಧನುಷ್​ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಆಗಲು ಅನ್ ಫಿಟ್, ಜ್ಞಾನೇಶ್ ಕುಮಾರ್​ರನ್ನು ತಕ್ಷಣ ಬಂಧಿಸಿ; ಮತ್ತೆ ಚುನಾವಣೆ ನಡೆಸಿ: ಮಮತಾ ಬ್ಯಾನರ್ಜಿ

ನಾವು 'ಭಯೋತ್ಪಾದನೆಯ ಸಂತ್ರಸ್ತರು, ಆದರೆ ಮಂಡಿಯೂರಿ ಶರಣಾಗಲಿಲ್ಲ; UN ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷರ ಪ್ರಬಲ ಭಾಷಣ!

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

IPL Auction: ಮೂರು ವರ್ಷದ ಬಳಿಕ ಮತ್ತೆ ಭಾರತದಲ್ಲೇ ಐಪಿಎಲ್ ಹರಾಜು; ಸ್ಥಳ, ದಿನಾಂಕ ಘೋಷಣೆ

ಸದನದಲ್ಲೇ ಕಾಂಗ್ರೆಸ್ ಶಾಸಕರ ನಡುವೆ ಜಟಾಪಟಿ; ಅನಿರೀಕ್ಷಿತ ಹೈಡ್ರಾಮಾ: 'ಸುಮ್ನಿರಮ್ಮಾ, ಹೊಡಿಬೇಡ' ಎಂದ ಆರ್ ಅಶೋಕ್!