ಕಾವೇರಿ ನದಿ 
ರಾಜ್ಯ

ಭಾರೀ ಮಳೆಯಿಂದ ತುಂಬಿದ ಕಾವೇರಿ: ತಮಿಳುನಾಡಿಗೆ ನೀರು ಹಂಚಿಕೆ ಮಾಡಲು ಇದ್ದ ಆತಂಕ ದೂರ

ಕಬಿನಿ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ಕರ್ನಾಟಕಕ್ಕೆ ತಮಿಳುನಾಡಿಗೆ 25.84 ಟಿಎಂಸಿ ಅಡಿ ಕಾವೇರಿ ನೀರಿನ ಕೊರತೆಯನ್ನು ನೀಗಿಸಲು ನೆರವಾಗಿದೆ.

ಮೈಸೂರು: ಕಬಿನಿ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ಕರ್ನಾಟಕಕ್ಕೆ ತಮಿಳುನಾಡಿಗೆ 25.84 ಟಿಎಂಸಿ ಅಡಿ ಕಾವೇರಿ ನೀರಿನ ಕೊರತೆಯನ್ನು ನೀಗಿಸಲು ನೆರವಾಗಿದೆ.

ಈ ತಿಂಗಳು ಭಾರೀ ಮಳೆ ಆರಂಭವಾಗುವ ಮುನ್ನವೇ, ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಗೆ ಸಾಕಷ್ಟು ಒಳಹರಿವು ಇರದ ಕಾರಣ ರಾಜ್ಯದಲ್ಲಿ ನೀರಿನ ಕಠಿಣ ಸ್ಥಿತಿಯನ್ನು ಎದುರಿಸುತ್ತಿತ್ತು. ಬ್ಯಾಕ್ ಲಾಗ್ ಬಿಡುಗಡೆ ಮಾಡಲು ಅಕ್ಟೋಬರ್ 30ರೊಳಗೆ ಬಿಳಿಗುಂಡ್ಲುವಿನಲ್ಲಿ  14 ಟಿಎಂಸಿ ಅಡಿ ನೀರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ರಾಜ್ಯಕ್ಕೆ ಆದೇಶಿಸಿತ್ತು.

ಸುಮಾರು ಒಂದು ವಾರದಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯದ ಒಳಹರಿವು 14,000 ಕ್ಯೂಸೆಕ್‌ಗಳಿಗೆ ಹೆಚ್ಚಾಗಿದ್ದು ಕೆಆರ್‌ಎಸ್ ಅಣೆಕಟ್ಟು 112 ಟಿಎಂಸಿಯಿಂದ 120 ಟಿಎಂಸಿಗೇರಿದೆ. ಕಬಿನಿ ಜಲಾಶಯದಲ್ಲಿಯೂ ಒಳಹರಿವು 7,000 ಕ್ಯೂಸೆಕ್‌ಗಳಿಗೆ ಏರಿಕೆಯಾದ್ದರಿಂದ ಒಂದು ವಾರದವರೆಗೆ ಅಧಿಕಾರಿಗಳು ಪ್ರತಿದಿನ 6,000 ಕ್ಯೂಸೆಕ್‌ಗಳನ್ನು ಬಿಡುಗಡೆ ಮಾಡಿದರು.

ಆಗಸ್ಟ್‌ನಲ್ಲಿ, ಸಮಿತಿಯು ಕರ್ನಾಟಕಕ್ಕೆ 32 ಟಿಎಂಸಿಅಡಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು, 10 ದಿನಗಳಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟವು 120 ಟಿಎಂಸಿಯಿಂದ 112 ಟಿಎಮ್‌ಸಿಗೆ ಇಳಿದಿದ್ದು, ಸ್ಥಳೀಯ ರೈತರ ಭರವಸೆಯನ್ನು ಬುಡಮೇಲು ಮಾಡಿತು.

ಸಕಾಲಿಕ ಮಳೆಯು ಕೆಆರ್ ಎಸ್  ಮತ್ತು ಕಬಿನಿ ಅಣೆಕಟ್ಟು ಪ್ರದೇಶಗಳ ರೈತರು ಎರಡು ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಕೆಆರ್‌ಎಸ್ ಅಚ್ಚುಕಟ್ಟಿಗೆ ತಿಂಗಳಿಗೆ ಸರಾಸರಿ 6-7 ಟಿಎಮ್ ಸಿ ಅಡಿ ನೀರು ಬೆಳೆಗಳಿಗೆ ಪೂರೈಸಲು ಅಗತ್ಯವಿದೆ.ಮಾರ್ಕೋನಹಳ್ಳಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ 6,000 ಕ್ಯೂಸೆಕ್‌ಗಳಿಗಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ. 

ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ ಭಾಗಗಳು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ತಮಿಳುನಾಡಿನ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಮುಂಗಾರು ಮುಗಿಯುತ್ತಿರುವುದರಿಂದ ಕೆಆರ್‌ಎಸ್ ಅಣೆಕಟ್ಟು ತನ್ನ ಸಾಮರ್ಥ್ಯದ ಮಟ್ಟವಾದ 124.8 ಅಡಿಗಳನ್ನು ತಲುಪದಿರಬಹುದು ಎಂದು ನೀರಾವರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಮಂಗಳವಾರ 14,000 ಕ್ಯೂಸೆಕ್‌ಗಳಷ್ಟು ನೀರು ಅಣೆಕಟ್ಟಿನ ಒಳಹರಿವು ಬುಧವಾರ 8,097 ಕ್ಯೂಸೆಕ್‌ಗಳಿಗೆ ಇಳಿಕೆಯಾಗಿದೆ ಮತ್ತು ಹೊರಹರಿವು 6,613 ಕ್ಯೂಸೆಕ್ ಆಗಿದೆ. ಅಣೆಕಟ್ಟು ಮಟ್ಟವು 120.05 ಅಡಿಗಳಷ್ಟಿದ್ದು. ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಅವರು 10 ದಿನಗಳ ಕಾಲ ನೀರಾವರಿ ಕಾಲುವೆಗಳ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಕೆಆರ್‌ಎಸ್ ಅಧೀಕ್ಷಕ ಎಂಜಿನಿಯರ್ ವಿಜಯಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT