ರಾಜ್ಯ

ಚೀಲದಲ್ಲಿ ದುಡ್ಡು ತಂದು ಹಂಚುವುದು ಕಾಂಗ್ರೆಸ್ ಸಂಸ್ಕೃತಿ: ಸಿಎಂ ಬೊಮ್ಮಾಯಿ

Manjula VN

ವಿಜಯಪುರ: ಗೋಣಿ ಚೀಲದಲ್ಲಿ ದುಡ್ಡು ತಂದು ಹಂಚುವ ಸಂಸ್ಕೃತಿ ಬಿಜೆಪಿಯದ್ದಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರವನ್ನು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ನವರು ಅಧಿಕಾರದಲ್ಲಿ ಇರುವಷ್ಟು ದಿನ ಅಭಿವೃದ್ಧಿ ಮಾಡದೇ ಅಭಿವೃದ್ಧಿಯ ಹಣವನ್ನು ಲಪಟಾಯಿಸಿ ಈಗ ಗೋಣಿ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.

ನಂಜನಗೂಡು ಚುನಾವಣಯಲ್ಲಿ ಕೂಡ ಅವರು ಇದನ್ನೇ ಮಾಡಿದ್ದಾರೆ. ಹಣ ಹಂಚುವುದು ಕಾಂಗ್ರೆಸ್ ಪಕ್ಷದ ಹಳೆಯ ಚಾಳಿಯಾಗಿದೆ ಎಂದು ಛೇಡಿಸಿದರು.

ಹಣ ಬಲ, ತೋಳ್ಬಲದಿಂದ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಹತಾಶೆಯಿಂದ  ಇಂತಹ ಟೀಕೆ ಮಾಡುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ಸೋತ ನಂತರ ಇಂತಹ ಟೀಕೆ ಮಾಡುತ್ತಿತ್ತು. ಈಗ ಸೋಲುವ ಮೊದಲೇ ಇಂತಹ ಟೀಕೆಗೆ ಮುಂದಾಗಿದೆ. ಚುನಾವಣೆಯ ಮೊದಲೇ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡಿ ಸೋಲೊಪ್ಪಿಕೊಂಡಿದೆ ಎಂದು ಹೇಳಿದರು.
 
ಸಿಂದಗಿ, ಹಾನಗಲ್ಲ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಮತದಾರರು ಬಿಜೆಪಿ ಪರವಾಗಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ಸಾಧನೆಯನ್ನು ಮೆಚ್ಚಿ ಮತದಾರರು ಮತ ಚಲಾಯಿಸಿದ್ದಾರೆ. ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಖಂಡಿತವಾಗಿಯೂ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂದಗಿಯಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವಂತಹ ಸೌಭಾಗ್ಯ ನಮ್ಮ ಸರ್ಕಾರಕ್ಕೆ ದೊರೆತಿದೆ. ನಾವು ಆರಂಭ ಮಾಡಿದ ಯೋಜನೆಗಳನ್ನು ನಾವೇ ಉದ್ಘಾಟನೆ ಮಾಡುವುದು ಸಂತಸದ ವಿಷಯ ಎಂದು ಬೊಮ್ಮಾಯಿ ಹರ್ಷ ವ್ಯಕ್ತ ಪಡಿಸಿದರು.

ಬಿಜೆಪಿ ಸರ್ಕಾರ ಕರ್ನಾಟಕದ ಅಭಿವೃದ್ಧಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಸೌಲಭ್ಯ, ರೈತರ ಜೀವನ ಜೀವನ ಸುಧಾರಿಸುವ ಕುರಿತು ನಾವು ಮಾತನಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಸುಳ್ಳಿನ ಸರಮಾಲೆಯನ್ನು ಹೆಣೆದು ಚುನಾವಣೆ ಗೆಲ್ಲುವ ಹುನ್ನಾರದಲ್ಲಿದ್ದಾರೆ. ಎರಡು ಕ್ಷೇತ್ರದಲ್ಲಿ ಅವರ ಆಸೇ ಇಡೇರುವುದಿಲ್ಲ ಎಂದು ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ನವರು ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸುತ್ತಾರೆ. ಇವರ ಒಳ ಒಪ್ಪಂದದಿಂದಲೇ ಸರ್ಕಾರ ಸಮ್ಮೀಶ್ರ ಸರ್ಕಾರ ರಚನೆ ಯಾಗಿ ಪತನಗೊಂಡಿದೆ. ಮೊದಲು ನಿಮ್ಮ ನಿಮ್ಮ ವ್ಯವಾಹಾರದ ಒಪ್ಪಂದಗಳನ್ನು ಮುಗಿಸಿಕೊಳ್ಳಿ ಎಂದು ಎರಡು ಪಕ್ಷದವರನ್ನು ಬೊಮ್ಮಾಯಿ ಕಾಲೆಳೆದರು.

ನಮ್ಮ ಒಪ್ಪದ ಏನಿದ್ದರು ಸಿಂದಗಿಯ ಜನತೆಯೊಂದಿಗೆ ಇದೆ, ಇಲ್ಲಿನ ರೈತರ ಜೋತೆ, ಅಭಿವೃದ್ಧಿಯ ಜೋತೆ, ಯುವಕರ ಜೋತೆ, ನಮ್ಮ ತಾಂದಿರ ಜೋತೆ, ಇಲ್ಲಿನ ಹಿಂದುಳಿದ ವರ್ಗದವರ ಜೋತೆ ನಮ್ಮ ಒಪ್ಪಂದವಾಗಿದೆ ಎಂದು ಅವರು ಹೇಳಿದರು.

SCROLL FOR NEXT