ಬಿಬಿಎಂಪಿ ಕಚೇರಿ 
ರಾಜ್ಯ

ಕೆರೆ ನಿರ್ವಹಣೆ, ಮಳೆನೀರು ಚರಂಡಿ ನೀರಿನ ಸಂಸ್ಕರಣೆಯಲ್ಲಿ ಅವ್ಯವಹಾರ: ಮಾಜಿ ಮೇಯರ್ ಆರೋಪ

ಕೆರೆಗಳ ನಿರ್ವಹಣೆ, ಮಳೆನೀರು ಚರಂಡಿಗಳು ಮತ್ತು ಚರಂಡಿಗಳ ನೀರಿನ ಸಂಸ್ಕರಣೆಯಲ್ಲಿನ ಬೃಹತ್ ಅವ್ಯವಹಾರಗಳು ನಡೆಯುತ್ತಿದೆ ಎಂದು ಮಾಜಿ ಮೇಯರ್ ಎನ್‌ಆರ್ ರಮೇಶ್ ಹೇಳಿದ್ದಾರೆ.

ಬೆಂಗಳೂರು: ಕೆರೆಗಳ ನಿರ್ವಹಣೆ, ಮಳೆನೀರು ಚರಂಡಿಗಳು ಮತ್ತು ಚರಂಡಿಗಳ ನೀರಿನ ಸಂಸ್ಕರಣೆಯಲ್ಲಿನ ಬೃಹತ್ ಅವ್ಯವಹಾರಗಳು ನಡೆಯುತ್ತಿದೆ ಎಂದು ಮಾಜಿ ಮೇಯರ್ ಎನ್‌ಆರ್ ರಮೇಶ್ ಹೇಳಿದ್ದಾರೆ.

ಈ ಹಿಂದೆಯೂ ಇದೇ ರೀತಿ ಆರೋಪಿಸಿದ್ದ ರಮೇಶ್ ಅವರು ಇದೀಗ ಮತ್ತೊಮ್ಮೆ ಪಾಲಿಕೆ ಎಂಜಿನಿಯರ್ ಗಳ ವಿರುದ್ಧ ಅಂತಹುದೇ ಆರೋಪ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದು ಇದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಈ ಬಾರಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಉಲ್ಲೇಖಿಸಿದ ಅವರು, 2016 ರಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗಳು ಬೊಮ್ಮನಹಳ್ಳಿ ಮತ್ತು ಆರ್‌ಆರ್‌ನಗರದ ಕೆರೆಗಳಿಗೆ ಸಂಸ್ಕರಿಸದ ಚರಂಡಿ ಸೇರಿದಂತೆ 62.97 ಕೋಟಿ ರೂ. ಬಿಲ್ ಅನ್ನು ಉಲ್ಲೇಖಿಸಿದ್ದಾರೆ.  ಲೆಕ್ಕಪರಿಶೋಧಕರು ಕಡತಗಳನ್ನು ಹುಡುಕಿದಾಗ, ಎಂಜಿನಿಯರ್‌ಗಳು ಕಡತಗಳು ಕಾಣೆಯಾಗಿವೆ ಎಂದು ಹೇಳಿ ವಿಷಯವನ್ನು ಪಕ್ಕಕ್ಕೆ ತಳ್ಳಿದರು. 

ನಂತರ 2019 ರಲ್ಲಿ, ಇಂಜಿನಿಯರ್‌ಗಳು ಅದೇ ಪ್ರಕರಣದ 94 ಲಕ್ಷ ರೂ.ಗಳ ಬಿಲ್ ಅನ್ನು ತೋರಿಸಿದಾಗ ವಿಷಯ ಮತ್ತೆ ಬೆಳಕಿಗೆ ಬಂದಿತು. ಇದು ಮತ್ತೆ ಲೆಕ್ಕ ಪರಿಶೋಧಕರ ಗಮನ ಸೆಳೆದಿದ್ದು, ಕಡತ ನಾಪತ್ತೆಯಾದರೆ ಬಾಕಿ ಲೆಕ್ಕ ಹಾಕಿ ಕೋಟ್ ಮಾಡುವುದು ಹೇಗೆ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿದರು.  ಸಿಎಜಿ ಮೂರು ತಿಂಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ ಎಂದು ಹೇಳಲಾಗಿದೆ. ಆದರೆ ಆ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ. 

ಬಿಬಿಎಂಪಿ ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಸೇರಿ ತೆರಿಗೆದಾರರ ಕೋಟಿಗಟ್ಟಲೆ ಹಣವನ್ನು ಲಪಟಾಯಿಸುವುದು ಇದೇ ಮೊದಲಲ್ಲ. ಈ ಹಿಂದೆಯೇ ಸಾಕಷ್ಟು ಬಾರಿ ಆಗಿದೆ ಎಂದು ರಮೇಶ್ ಹೇಳಿದರು. 

ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT