ರಾಜ್ಯ

ಪಾಕಿಸ್ತಾನ-ಚೀನಾ ಗಡಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ಸಚಿವ ಅಜಯ್ ಭಟ್

Shilpa D

ಬೆಂಗಳೂರು: ಪಾಕಿಸ್ತಾನ ಮತ್ತು ಚೀನಾ ದೇಶಗಳೊದಿಗೆ ಭಾರತ ದುರ್ಬಲ ಸಂಬಂಧವನ್ನು ಹೊಂದಿದೆ, ಈ ಹಿನ್ನೆಲೆಯಲ್ಲಿ , ಭಾರತವು ತನ್ನ ಗಡಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ‘ದಕ್ಷಿಣ ಭಾರತದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಸಮ್ಮೇಳನ'ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ-ಚೀನಾ ಗಡಿ ಮತ್ತು ವಾಘಾ ಗಡಿಯಲ್ಲಿ ಕದನ ವಿರಾಮ ಇರುವ ಪ್ರದೇಶಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಬಡ್ತಿ ನೀಡಲಾಗುವುದು ಎಂದರು.

ಭಾರತ-ಚೀನಾ ಗಡಿಯಲ್ಲಿರುವ ಕಲ್ಲುಗಳ ರಾಶಿ, ಓಂ ಲಿಂಗ ಅಥವಾ ಶಾಂತಿಯ ಬಂಡೆಯ ಬಗ್ಗೆ ಮತ್ತು ಸ್ನೇಹ ಸಂಬಂಧ ಹೊಂದುವ ಸಂಬಂಧ ಗಡಿಯ ಎರಡೂ ಬದಿಯಲ್ಲಿರುವ ಮನೆಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದು ಭಟ್ ಹೇಳಿದರು. ಇನ್ನೂ ಪ್ರವಾಸಿಗರು ಕೈಲಾಸ ಮಾನಸ ಸರೋವರವನ್ನು ತಲುಪಲು ಬೇಕಾದ ರಸ್ತೆ ಸಂಪರ್ಕವನ್ನು ಸಹ ಸುಧಾರಿಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲಿ ಗಡಿಗಳನ್ನು ತೆರವು ಮಾಡಲಾಗುತ್ತದೆ ಮತ್ತು ಕದನ ವಿರಾಮವಿದೆ ಘೋಷಿಸಲಾಗಿದೆ ಅಲ್ಲಿ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತದೆ. ಈ ಪಟ್ಟಿಯಲ್ಲಿ ಕಾಶ್ಮೀರವೂ ಸೇರಿದೆ ಎಂದು ಹೇಳಿದರು.  ಪ್ರವಾಸೋದ್ಯಮ ಸಚಿವಾಲಯವು ನಾಲ್ಕು ಸ್ಥಳಗಳನ್ನು ಗುರುತಿಸಿದ್ದು, ಅಧಿಕಾರಿಗಳು ಅವುಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು, ಈ ಹೆಸರುದಳನ್ನು ಅಂತಿಮಗೊಳಿಸಲು  ಹಾಗೂ ಅನುಮೋದನೆ ಪಡೆಯಲು ರಕ್ಷಣಾ ಸಚಿವಾಲಯದೊಂದಿಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ವಾಘಾ-ಅಟ್ಟಾರಿ ಗಡಿಯಲ್ಲಿ ಹೆಚ್ಚಿನ ಆಕರ್ಷಕ ಸ್ಥಳಗಳಿವ ಮತ್ತು ಅಂತಹ ತಾಣಗಳನ್ನು ಪ್ರಚಾರ ಮಾಡುವ ಯೋಜನೆ ಇದೆ. ಈ ಸ್ಥಳಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ವಿವಿಧ ಪ್ರದೇಶಗಳ ಸಂಸ್ಕೃತಿಗಳನ್ನು ಪ್ರದರ್ಶಿಸುವುದು ಮತ್ತು ಜನರನ್ನು ಒಟ್ಟುಗೂಡಿಸುವುದು ಪ್ರವಾಸೋದ್ಯಮದ ಉದ್ದೇಶವಾಗಿದೆ ಎಂದು ಭಟ್ ಹೇಳಿದ್ದಾರೆ.

SCROLL FOR NEXT